Home ಟಾಪ್ ಸುದ್ದಿಗಳು ಸಚಿವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಸುಳ್ಳು: ಗ್ರಾ. ಪಂ ಅಧ್ಯಕ್ಷ ನಾಗೇಶ್ ಸ್ಫೋಟಕ ಹೇಳಿಕೆ

ಸಚಿವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದು ಸುಳ್ಳು: ಗ್ರಾ. ಪಂ ಅಧ್ಯಕ್ಷ ನಾಗೇಶ್ ಸ್ಫೋಟಕ ಹೇಳಿಕೆ

ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಈಶ್ವರಪ್ಪ  ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದು ಸುಳ್ಳು, ಈಶ್ವರಪ್ಪ ಅವರು 2 ಬಾರಿ ಸಂತೋಷ್ ನನ್ನು ಭೇಟಿಯಾಗಿದ್ದಾರೆ ಎಂದು ಹಿಡಲಾಗ ಗ್ರಾ. ಪಂ ಅಧ್ಯಕ್ಷ ನಾಗೇಶ್ ಹೇಳಿದ್ದಾರೆ.

ಯಾವನೋ ಒಬ್ಬ ಸಂತೋಷ್ ಎನ್ನುವವನು ಆತ್ಮಹತ್ಯೆ ಮಾಡಿಕೊಂಡರೆ ನಾನೇಕೆ ರಾಜೀನಾಮೆ ನೀಡಬೇಕು. ಸಂತೋಷ್ ಯಾರೆಂದು ನನಗೆ ಗೊತ್ತಿಲ್ಲ. ನಾನು ಆತನನ್ನು ಭೇಟಿ ಮಾಡಲಿಲ್ಲ ಎಂದು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿ ರಾಜೀನಾಮೆ ನಿರಾಕರಿಸಿದ್ದರು.

Join Whatsapp
Exit mobile version