Home ಟಾಪ್ ಸುದ್ದಿಗಳು ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಸ್ವತಂತ್ರ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧೆ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಹಾವೇರಿ: ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಕೂಡ ಒಬ್ಬರು. ಈಶ್ವರಪ್ಪನವರು ಶಿಸ್ತಿನ ಸಿಪಾಯಿ, ಅವರ ಜತೆ ನಾನು ಮಾತನಾಡುವೆ. ಬಿಜೆಪಿ ಟಿಕೆಟ್​ ವರಿಷ್ಠರ ತೀರ್ಮಾನ, ಯಾರಿಗೂ ಮೋಸ ಮಾಡಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಅವರಿಗೆ ಎಲ್ಲಾ ಗೊತ್ತಿದೆ. ನಾನು ಏನು ಹೇಳಿದ್ದೆ? ಪಾರ್ಲಿಮೆಂಟರಿ ಬೋರ್ಡ್​​ನಲ್ಲಿ ಏನು ಹೇಳಿದ್ದೆ ಎಲ್ಲಾ ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.

ನನ್ನ ಹೆಸರು ಪಾರ್ಲಿಮೆಂಟರಿ ಬೋರ್ಡ್​ ನಲ್ಲಿ ಕೂಡ ಫೈನಲ್ ಆಗಿರಲಿಲ್ಲ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಪಿಎಂ, ನಡ್ಡಾಜಿ, ಗೃಹ ಸಚಿವರು ತಿಳಿಸಿದ ಬಳಿಕ ನಿರ್ಧಾರ ಮಾಡಬೇಕಾಯಿತು. ಅನಿವಾರ್ಯ ಇದೆ ನೀನು ಸ್ಪರ್ಧಿಸು ಎಂದು ಪ್ರಧಾನಿ, ವರಿಷ್ಠರು ಹೇಳಿದರು. ಹೀಗಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

Join Whatsapp
Exit mobile version