Home ಟಾಪ್ ಸುದ್ದಿಗಳು ಛೇ, ಇದೆಂತಹಾ ದುಸ್ಥಿತಿ ನಿಮ್ಮದು ಬೊಮ್ಮಾಯಿಯವರೇ!: ಕಾಂಗ್ರೆಸ್ ಪೋಸ್ಟ್

ಛೇ, ಇದೆಂತಹಾ ದುಸ್ಥಿತಿ ನಿಮ್ಮದು ಬೊಮ್ಮಾಯಿಯವರೇ!: ಕಾಂಗ್ರೆಸ್ ಪೋಸ್ಟ್

ಬೆಂಗಳೂರು: ಛೇ ಇದೆಂತಹಾ ದುಸ್ಥಿತಿ ಬಸವರಾಜ ಬೊಮ್ಮಾಯಿಯವರೇ, ಮಾಜಿ ಮುಖ್ಯಮಂತ್ರಿಯಾಗಿ, ವಯಸ್ಸಿನಲ್ಲಿ ಹಿರಿಯರಾಗಿ ಕಿರಿಯ ವಯಸ್ಸಿನ ಬಿ ಸಿ ಪಾಟೀಲ್ ಕಾಲಿಗೆ ಬೀಳುವುದೇ. ನಿಮ್ಮ‌‌ದು ದಯನೀಯ ಸ್ಥಿತಿ ಎಂದು ಕಾಂಗ್ರೆಸ್ ಪರಿತಾಪ ವ್ಯಕ್ತಪಡಿಸಿ X ಪೋಸ್ಟ್ ಮಾಡಿದೆ.

“ಗೋ ಬ್ಯಾಕ್ ಬೊಮ್ಮಯಿ” ಅಭಿಯಾನ ಶುರುವಾಗದಿರಲಿ ಎಂದು ಅಂಟಸಿಪೇಟರಿ ಬೇಲ್ ತೆಗೆದುಕೊಳ್ಳುತ್ತಿರುವುದಾ ಅಥವಾ ಟಿಕೆಟ್ ವಂಚಿತ ಪಾಟೀಲರನ್ನು ಓಲೈಸಿಕೊಳ್ಳುತ್ತಿರುವುದಾ ಬೊಮ್ಮಯಿಯವರ ಇಂತಹ ಶರಣಾಗತಿಯ ಸ್ಥಿತಿ ದಯನಿಯವಾಗಿದೆ ಎಂದು ಕಾಂಗ್ರೆಸ್ ಬರೆದಿದೆ.

ಬಸವರಾಜ ಬೊಮ್ಮಾಯಿ ಅವರಿಗೆ ಹಾವೇರಿ ಕ್ಷೇತ್ರದ ಅಂದ್ರೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ.

ಬಳಿಕ ಬೊಮ್ಮಾಯಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರನ್ನು ಭೇಟಿ ಮಾಡಿ ಅವರ ಬೆಂಬಲ ಕೋರಿದ್ದಾರೆ. ಈ ಸಂದರ್ಭ ಬೊಮ್ಮಾಯಿ ಬಿಸಿ ಪಾಟೀಲ್ ಕಾಲಿಗೆ ಎರಗುತ್ತಿರುವ ವೀಡಿಯೋ ವೈರಲ್ ಆಗಿದೆ.

ಈ ವಿಡಿಯೋ ಕುರಿತು ಈಗ ಕರ್ನಾಟಕ ಕಾಂಗ್ರೆಸ್ X ಮೂಲಕ ವ್ಯಂಗ್ಯವಾಡಿದೆ.

Join Whatsapp
Exit mobile version