ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರದಂದು ಡಾರ್ಜಿಲಿಂಗ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬೀದಿಬದಿ ಪಾನಿಪುರಿ ಮಾರಾಟ ಮಾಡಿದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗುತ್ತಿದೆ.
ಡಾರ್ಜಿಲಿಂಗ್ ಭೇಟಿಯ ಸಂದರ್ಭದಲ್ಲಿ ರಸ್ತೆ ಬದಿ ಪಾನಿಪುರಿ ಮಾರಾಟ ಮಾಡಲಾಗುತ್ತಿದ್ದ ಅಂಗಡಿಯೊಂದಕ್ಕೆ ತೆರಳಿ ಅಲ್ಲಿದ್ದವರ ಬಳಿ ಕುಶಲೋಪಕಾರಿ ನಡೆಸಿದರು. ಆ ಬಳಿಕ ತಮ್ಮ ಕೈಯ್ಯಾರೆ ಪಾನಿಪುರಿಯನ್ನು ಜನರಿಗೆ ಸರ್ವ್ ಮಾಡಿದ್ದು ಈ ಚಿತ್ರವು ಇದೀಗ ತುಂಬಾ ವೈರಲ್ ಆಗಿದೆ.