Home ಟಾಪ್ ಸುದ್ದಿಗಳು ಪಶ್ಚಿಮ ಬಂಗಾಳ: ಶಾಸಕರ ಭವನದಲ್ಲಿ ಟಿಎಂಸಿ ಶಾಸಕನ ಬಾಡಿಗಾರ್ಡ್ ಶವ ಪತ್ತೆ

ಪಶ್ಚಿಮ ಬಂಗಾಳ: ಶಾಸಕರ ಭವನದಲ್ಲಿ ಟಿಎಂಸಿ ಶಾಸಕನ ಬಾಡಿಗಾರ್ಡ್ ಶವ ಪತ್ತೆ

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಶಾಸಕನ ಅಂಗರಕ್ಷಕನ ಶವ ಪಶ್ಚಿಮ ಬಂಗಾಳ ಶಾಸಕರ ಭವನದ ಆವರಣದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯದೇಬ್ ಘೋರಾಯ್ ಮೃತ ವ್ಯಕ್ತಿ. ಇವರು ಪುರುಲಿಯ ಬಂಡ್ವಾನ್ ಟಿಎಂಸಿ ಶಾಸಕ ರಾಜೀಬ್ ಲೋಚನ್ ಅವರ ಅಂಗರಕ್ಷಕರಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸಾವಿಗೆ ಕಾರಣವನ್ನು ಪತ್ತೆ ಮಾಡಲಾಗುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸುದ್ದಿ ತಿಳಿದ ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಶಾಸಕರ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Join Whatsapp
Exit mobile version