ಮುಂಬೈ: ಬಿಜೆಪಿಯಂತೆ ನಾವು ಶಿಂಧೆ ಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ ಎಂದು ಹೇಳಿರುವ ಶಿವಸೇನೆ ನಾಯಕ ಸಂಜಯ್ ರಾವುತ್ 2019 ರಲ್ಲಿ ಅಧಿಕಾರಕ್ಕೆ ಬಂದ ದಿನವೇ ಉದ್ಧವ್ ಠಾಕ್ರೆ ಸರಕಾರವನ್ನು “ಅಸ್ತವ್ಯಸ್ತಗೊಳಿಸಲು” ಬಿಜೆಪಿ ಶಪಥ ಮಾಡಿತ್ತು ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಸರಕಾರವನ್ನು ಅಭಿನಂದಿಸುತ್ತೇನೆ. ಉದ್ಧವ್ ಠಾಕ್ರೆ ಸರಕಾರ ಅಧಿಕಾರಕ್ಕೆ ಬಂದಾಗ ಅವರಿಗೆ ತೊಂದರೆ ಕೊಡುತ್ತೇವೆ ಎಂದು ಬಿಜೆಪಿ ಮೊದಲ ದಿನವೇ ಹೇಳಿತ್ತು. ಆದರೆ ನಾವು ಹಾಗೆ ಮಾಡುವುದಿಲ್ಲ, ನಾವು ಈ ಸರಕಾರಕ್ಕೆ ತೊಂದರೆ ನೀಡುವುದಿಲ್ಲ. ಸರಕಾರವು ಸಾರ್ವಜನಿಕರಿಗಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
ಶಿವಸೇನೆಯ 39 ಶಾಸಕರು ಠಾಕ್ರೆ ವಿರುದ್ಧ ಬಂಡಾಯವೆದ್ದು ಏಕನಾಥ್ ಶಿಂಧೆ ಬಣಕ್ಕೆ ಸೇರಿದರೂ ಶಿವಸೇನೆಯ ಸಂಘಟನೆ ಇನ್ನು ಗಟ್ಟಿಯಾಗಿದೆ ಎಂದು ತಿಳಿಸಿದರು.