ಬೆಂಗಳೂರು: ನಮ್ಮಲ್ಲಿ ಆ ಬೇಧ ಭಾವ ಇಲ್ಲ, ಎಲ್ಲರನ್ನೂ ಇವತ್ತಿನಿಂದಲೇ ಮಾತನಾಡಿಸಿ ಅಸಮಾಧಾನ ಸರಿಪಡಿಸುತ್ತೇವೆ. ಎಲ್ಲಾ ಭಿನ್ನಾಭಿಪ್ರಾಯ ಇರುವವರ ಜೊತೆ ಮಾತನಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಉತ್ತರ ಕರ್ನಾಟಕ ಭಾಗದಲ್ಲಿ ಇಬ್ಬರು ಮುಖ್ಯಮಂತ್ರಿ ಆಗಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್, ಬೊಮ್ಮಾಯಿ ಸಿಎಂ ಆಗಿದ್ದಾರೆ. ಕೋಸ್ಟಲ್ ಕರ್ನಾಟಕ ಭಾಗದಿಂದ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾರೆ. ಮಧ್ಯ ಕರ್ನಾಟಕದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ . ಹಳೆ ಮೈಸೂರು ಭಾಗಕ್ಕೆ ಯಾವತ್ತೂ ಪ್ರಾತಿನಿಧ್ಯ ಸಿಕ್ಕಿಲ್ಲ, ಬಿಜೆಪಿಯ ಇತಿಹಾಸದಲ್ಲಿ ಇದೇ ಮೊದಲು ಸಿಕ್ಕಿರೋದು ಎಂದು ಹೇಳಿದ್ದಾರೆ.
ಬಿಜೆಪಿ ಹೊರತುಪಡಿಸಿ ಸಿದ್ದರಾಮಯ್ಯ ಎಲ್ಲ ಪಕ್ಷಕ್ಕೆ ಹೋಗಿದ್ದಾರೆ. ಯಾಕಂದ್ರೆ ನಾವು ಬಿಜೆಪಿಗೆ ಬಿಟ್ಟುಕೊಳ್ಳಲ್ಲ. ಮುಂದೆ ಕಾಂಗ್ರೆಸ್ನಿಂದ ಎರಡೂವರೆ ವರ್ಷದ ನಂತರ ಹೊರ ಹಾಕಿದರೆ, ಟಿಪ್ಪು ಹೆಸರಲ್ಲಿ ಪಾರ್ಟಿ ಮಾಡುತ್ತಾರೆ. ಸಿದ್ದರಾಮಯ್ಯ ಒಬ್ಬ ಪಕ್ಷಾಂತರಿ ಎಂದು ವಾಗ್ದಾಳಿ ಮಾಡಿದರು.