ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ: ಸಿಎಂ ಇಬ್ರಾಹಿಂ

Prasthutha|

ಬೆಂಗಳೂರು: ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ ಅವರಿಗೆ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಎಚ್ಚರಿಕೆ ನೀಡಿದರು.

- Advertisement -

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಬ್ರಾಹಿಂ, ಡಿಸೆಂಬರ್ 11ರ ಬಳಿಕ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ರಾಜ್ಯದಲ್ಲಿ ನಮಗೆ ಮೂರನೇ ಶಕ್ತಿಯಾಗಿ ಬೆಳೆಯಲು ಅವಕಾಶವಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮತ್ತೊಮ್ಮೆ ಹೇಳುತ್ತೇನೆ. ನಮ್ಮ ಮಾತನ್ನು ಕೇಳದಿದ್ದರೆ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ನೋಡಿ ಬೇಸರವಾಯ್ತು. ಕುಮಾರಸ್ವಾಮಿ ಅವರೇ ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ. ದೇವೇಗೌಡ ಅವರು ಒತ್ತಡಕ್ಕೆ ಒಳಗಾಗಿದ್ದಾರೆ, ಸ್ವಂತ ನಿರ್ಧಾರ ತೆಗೆದುಕೊಂಡಿಲ್ಲ. ಎಲ್ಲಾ ಶಾಸಕರು ಜಾತ್ಯತೀತ ಸಿದ್ಧಾಂತದಲ್ಲೇ ಗೆದ್ದು ಬಂದಿರುವುದು. ಈಗಾಗಲೇ ಜೆಡಿಎಸ್ನ ಐವರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಇದು ದೇವೇಗೌಡ, ಕುಮಾರಸ್ವಾಮಿ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ಹೀಗಾಗಿ ಸಮಾಧಾನದಿಂದ ಅವರಿಗೆ ಸಂದೇಶ ಮುಟ್ಟಿಸುತ್ತಿದ್ದೇನೆ ಎಂದರು.



Join Whatsapp