ಬೆಂಗಳೂರು: ಮಸೀದಿಯಲ್ಲಿರುವ ಧ್ವನಿವರ್ಧಕಕ್ಕೆ ವಿರುದ್ಧವಾಗಿ ದೇವಾಸ್ಥಾನದಲ್ಲೂ ಧ್ವನಿವರ್ಧಕಗಳನ್ನು ಅಳವಡಿಸಿ ಸರ್ಕಾರಕ್ಕೆ ಮೇ 1ರ ವರೆಗೆ ಗಡುವು ಕೊಡುತ್ತೇವೆ. ಅಷ್ಟರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ತೆಗೆಸದಿದ್ದರೆ, ಮೇ 9 ರಂದು ಕರ್ನಾಟಕದ ಎಲ್ಲಾ ದೇವಾಲಯಗಳಲ್ಲೂ ಲೌಡ್ ಸ್ಪೀಕರ್ ಮೂಲಕ ಭಜನೆ, ಸುಪ್ರಭಾತಗಳನ್ನು ಹಾಕಿಸುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಈಗಾಗಲೇ ನೂರಾರು ದೇವಾಲಯಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಠಾಧೀಶರೊಂದಿಗೂ ಮಾತನಾಡಲಿದ್ದೇವೆ. ಮೇ 1 ರೊಳಗೆ ಮಸೀದಿಗಳ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ತೆಗೆಸಬೇಕು. ಇಲ್ಲದೇ ಇದ್ದರೆ ಮೇ 9 ರಂದು ಎಲ್ಲಾ ದೇವಸ್ಥಾನಗಳಲ್ಲಿ ಲೌಡ್ ಸ್ಪೀಕರ್ ಮೊಳಗುವುದು ಖಚಿತ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಮುತಾಲಿಕ್ ಹುಬ್ಬಳಿಯ ವಾಣಿ ಬಡಾವಣೆ ಅಕ್ರಮವಾಗಿ ನಿರ್ಮಾಣವಾಗಿದೆ. ಇದಕ್ಕೆ ಮೊದಲು ಜೆಸಿಬಿ ಹಾಕಿ ಕಿತ್ತು ಬಿಡಿ. ಹುಬ್ಬಳ್ಳಿಯಲ್ಲಿ ಗಲಭೆಯಾದರೂ ಎಚ್ಚೆತ್ತುಕೊಳ್ಳಿ. ಮೊನ್ನೆ ಗಲಭೆಯಾಗಿರುವ ಸಂದರ್ಭದಲ್ಲಿ ಅತೀ ಹೆಚ್ಚು ಜನ ಈ ಬಡಾವಣೆಯಲ್ಲೇ ಸೇರಿದ್ದರು ಎಂದು ತಿಳಿಸಿದರು.