Home ಟಾಪ್ ಸುದ್ದಿಗಳು ಬರ ಪರಿಹಾರದ ಹಣ ಲೂಟಿ ಹೊಡೆಯಲು ಬಿಡಲ್ಲ, ಕಾವಲು ಕಾಯುತ್ತೇವೆ: ಆರ್ ಅಶೋಕ್

ಬರ ಪರಿಹಾರದ ಹಣ ಲೂಟಿ ಹೊಡೆಯಲು ಬಿಡಲ್ಲ, ಕಾವಲು ಕಾಯುತ್ತೇವೆ: ಆರ್ ಅಶೋಕ್

ಬೆಂಗಳೂರು: ಕೇಂದ್ರದ ಬರ ಪರಿಹಾರ ಲೂಟಿ ಹೊಡೆಯಲು ನಾವು ಬಿಡಲ್ಲ. ಈ ಹಣವನ್ನು ನಾವು ಕಾವಲು ಕಾಯುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಲೂಟಿಕೋರರ ಪಕ್ಷ ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿದೆ. ಯಾವಾಗ ಯಾವಾಗ ಕರ್ನಾಟಕ ಹಣ ಕೇಳಿದೆ? ಎಷ್ಟು ಬಿಡುಗಡೆ ಮಾಡಿದೆ? ಹೇಳಲಿ. ಅನುದಾನ ತಾರತಮ್ಯ ಮಾಡಿದ್ದರೆ ನಾವೇ ಬಂದು ಕ್ಷಮಾಪಣೆ ಕೇಳುತ್ತೇವೆ. ಇಲ್ಲ ಅಂದರೆ ಅವರು ಕ್ಷಮಾಪಣೆ ಕೇಳಲಿ ಎಂದು ಕಿಡಿಕಾರಿದ್ದಾರೆ.


ಯಾರು ಜಾಸ್ತಿ ಬಿಡುಗಡೆ ಮಾಡಿದಾರೆ ಜನ ತೀರ್ಮಾನ ಮಾಡಲಿ. ಯಾವುದೇ ಕಾರಣಕ್ಕೂ ಹಣ, ಚೆಕ್ ಮೂಲಕ ಬರದ ಹಣ ಬಿಡುಗಡೆ ಮಾಡಬಾರದು. ಡಿಬಿಟಿ ಮೂಲಕವೇ ವರ್ಗಾಯಿಸಬೇಕು. ಜಾಸ್ತಿ ಬರ ಪರಿಹಾರ ಬಂದರೆ ಜಾಸ್ತಿ ಲೂಟಿ ಹೊಡೆಯಬಹುದು ಅಂತ ಕೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

Join Whatsapp
Exit mobile version