Home ಟಾಪ್ ಸುದ್ದಿಗಳು ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ: ಮುಸ್ಲಿಮ್ ಶಾಸಕಿ ಕನೀಜ್ ಫಾತಿಮಾ

ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ: ಮುಸ್ಲಿಮ್ ಶಾಸಕಿ ಕನೀಜ್ ಫಾತಿಮಾ

ಕಲಬುರಗಿ: ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ನಿಷೇಧವನ್ನು ನಮ್ಮ ಸರ್ಕಾರ ಹಿಂಪಡೆಯಲಿದೆ ಎಂದು ಶಾಸಕಿ ಕನೀಜ್ ಫಾತಿಮಾ ಅವರು ಹೇಳಿದ್ದಾರೆ.


ಕಲಬುರಗಿ ಉತ್ತರದ ಹಾಲಿ ಕಾಂಗ್ರೆಸ್ ಶಾಸಕಿಯಾಗಿದ್ದ ಫಾತಿಮಾ ಅವರು, ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.


ನಾವು ಮುಂಬರುವ ದಿನಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇವೆ ಮತ್ತು ನಾವು ಆ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನೀಡುತ್ತೇವೆ. ಅವರು ತಮ್ಮ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ. ಅವರು ಅಮೂಲ್ಯವಾದ ಎರಡು ವರ್ಷಗಳ ಸಮಯವನ್ನು ಕಳೆದುಕೊಂಡಿದ್ದಾರೆ ಎಂದು ಫಾತಿಮಾ ಅವರು ಸ್ಕ್ರೋಲ್ ಗೆ ತಿಳಿಸಿದ್ದಾರೆ.

Join Whatsapp
Exit mobile version