ಬೆಂಗಳೂರು: “ನಾವು ಕೆಂಪುಕೋಟೆಯಲ್ಲೇ ರಾಷ್ಟ್ರಧ್ವಜದ ಬದಲು ಕೇಸರಿ ಬಾವುಟ ಹಾರಿಸುತ್ತೇವೆ” ಎಂದು ಸಚಿವ ಈಶ್ವರಪ್ಪ ದೇಶದ್ರೋಹದ ಹೇಳಿಕೆ ನೀಡಿದ್ದಾರೆ.
ಕಾಲೇಜಿನ ಧ್ವಜ ಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ ಬಗ್ಗೆ ಡಿ.ಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕೇಸರಿ ಧ್ವಜ ಕೆಂಪುಕೋಟೆ ಮೇಲೆ ಕೂಡ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಕಲಬುರಗಿ ಶಾಸಕಿ ಹಿಜಾಬ್ ಹಾಕಿಕೊಂಡು ಶಾಸನ ಸಭೆಗೆ ಬರುವುದಕ್ಕಿಂತ ಅವರು ಮಸೀದಿಗೆ ಹೋಗಲಿ ಎಂದು ಅವರು ಹೇಳಿದ್ದಾರೆ.