Home ಟಾಪ್ ಸುದ್ದಿಗಳು ಮನೆಯ ಕೆಲಸಗಾರನಂತೆ ನಮ್ಮನ್ನು ಕಾಣುತ್ತಿದ್ದರು: ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ವಾಗ್ದಾಳಿ

ಮನೆಯ ಕೆಲಸಗಾರನಂತೆ ನಮ್ಮನ್ನು ಕಾಣುತ್ತಿದ್ದರು: ಠಾಕ್ರೆ ವಿರುದ್ಧ ಏಕನಾಥ್ ಶಿಂಧೆ ವಾಗ್ದಾಳಿ

ಉದ್ಧವ್ ಠಾಕ್ರೆ ನಮ್ಮನ್ನು ಮನೆಯ ಕೆಲಸಗಾರನಂತೆ ಕಾಣಲಾರಂಭಿಸಿದ್ದರು, ಆದರೆ ಶಿವಸೇನೆಯಲ್ಲಿ ಮಾಲಿಕ ಅಥವಾ ಸೇವಕನೆಂಬ ಪರಿಕಲ್ಪನೆ ಇಲ್ಲ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ವಾಗ್ದಾಳಿ ನಡೆಸಿದ್ದಾರೆ.

ಶಿವಸೇನೆಯಿಂದ ಬಂಡಾವೇಳಲು ತಮಗಿದ್ದ ಕಾರಣವನ್ನು ಏಕನಾಥ್ ಶಿಂಧೆ ತಿಳಿಸಿದ್ದಾರೆ. ಉದ್ಧವ್ ಠಾಕ್ರೆಯವರು ಬಾಳಾಸಾಹೇಬ್ ಠಾಕ್ರೆಯವರ ಸಿದ್ಧಾಂತದಿಂದ ವಿಮುಖರಾಗಿದ್ದಾರೆ. ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಉದ್ಧವ್ ಕೈಬಿಟ್ಟಿದ್ದರಿಂದ ತಾವು ಬಂಡಾಯವೆದ್ದಿದ್ದಾಗಿ ಶಿಂಧೆ ತಿಳಿಸಿದ್ದಾರೆ. ನನಗೆ ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ ಆದರೆ ಬಾಳಾಸಾಹೇಬ್ ಠಾಕ್ರೆ ಅವರು ಸಿದ್ಧಾಂತಕ್ಕೆ ಧಕ್ಕೆಯಾಗುತ್ತಿರುವುದನ್ನು ಕಂಡು ಬಂಡಾಯವೆದ್ದೆವು ಎಂದಿದ್ದಾರೆ.

Join Whatsapp
Exit mobile version