Home ಟಾಪ್ ಸುದ್ದಿಗಳು ನಮ್ಮನ್ನು ಕ್ರಿಮಿನಲ್ ಗಳೆಂದು ಪ್ರಚಾರ ಮಾಡಲಾಯಿತು: ಶಾರೂಕ್ , ಆರ್ಯನ್ ಖಾನ್ ಬೇಸರ

ನಮ್ಮನ್ನು ಕ್ರಿಮಿನಲ್ ಗಳೆಂದು ಪ್ರಚಾರ ಮಾಡಲಾಯಿತು: ಶಾರೂಕ್ , ಆರ್ಯನ್ ಖಾನ್ ಬೇಸರ

ಮುಂಬೈ: ಕಳೆದ ವರುಷ ಎನ್ ಸಿಬಿ- ಮಾದಕ ದ್ರವ್ಯ ನಿಯಂತ್ರಣ ಮಂಡಳಿಯವರು ಆರ್ಯನ್ ಖಾನ್ ರನ್ನು ಬಂಧಿಸಿದಾಗ ಆತ ಇದ್ದ ಹಡಗಿನಲ್ಲಿ ಡ್ರಗ್ಸ್ ಇತ್ತಾದರೂ ಆತನ ಬಳಿ ಡ್ರಗ್ಸ್ ಇರಲಿಲ್ಲ. ಆದರೂ ನಮ್ಮನ್ನು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಾಣಿಕೆದಾರರು ಎಂದು ಪ್ರಚಾರ ಮಾಡಲಾಯಿತು ಎಂದು ಬಾಲಿವುಡ್ ಖ್ಯಾತ ನಟ ಶಾರೂಕ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.


ಶಾರೂಕ್ ಖಾನ್ ಮಗ ಆರ್ಯನ್ ಕೆಲವು ವಾರ ಜೈಲಲ್ಲಿ ಕಳೆದು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅಂತೂ ಎಲ್ಲ ಅಪಪ್ರಚಾರ ಮುಗಿದ ಮೇಲೆ 2022ರ ಮೇನಲ್ಲಿ ಆರ್ಯನ್ ಗೆ ಕ್ಲೀನ್ ಚಿಟ್ ನೀಡಲಾಯಿತು. ಎನ್ ಸಿಬಿ ದಾಳಿಯ ಡೈರೆಕ್ಟರ್ ಜನರಲ್ ಆಗಿದ್ದ ಸಂಜಯ್ ಸಿಂಗ್ ಈ ಬಗ್ಗೆ ಕೆಲವು ಮುಕ್ತ ಮಾತುಗಳನ್ನು ಆರ್ಯನ್ ಜೊತೆ ಮಾತನಾಡಿದ್ದಾಗಿ ವರದಿಯಾಗಿದೆ. ತೆರದ ಮನಸ್ಸಿನಿಂದ ಸಂಜಯ್ ಸಿಂಗ್ ಮಾತನಾಡುವುದಾಗಿ ಹೇಳಿದ್ದರು.


“ನಮ್ಮನ್ನು ನೀವು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳ ಸಾಗಾಣಿಕೆದಾರರು ಎಂದು ಬ್ರಾಂಡ್ ಮಾಡಿದ್ದೀರಿ. ಈ ಆರೋಪಗಳೆಲ್ಲ ಅಸಂಬದ್ಧ ಎಂದು ಅನಿಸುವುದಿಲ್ಲವೆ ಸಾರ್? ನನ್ನಲ್ಲಿ ಅವರಿಗೆ ಯಾವುದೇ ಡ್ರಗ್ ಸಿಕ್ಕಿಲ್ಲ; ಆದರೂ ಅವರು ನನ್ನನ್ನು ದಸ್ತಗಿರಿ ಮಾಡಿದರು. ಸರ್ ನೀವು ದೊಡ್ಡ ತಪ್ಪು ಮಾಡಿದಿರಿ, ನನ್ನ ಘನತೆ ಮಣ್ಣು ಪಾಲು ಮಾಡಿದಿರಿ. ತಪ್ಪಿಲ್ಲದೆ ನಾನು ಅಷ್ಟು ದಿನ ಜೈಲಲ್ಲಿ ಇರಬೇಕಾಯಿತಲ್ಲ?” ಎಂದ ಆರ್ಯನ್ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.


ಶಾರೂಕ್ ಪ್ರಕಾರ ಮತ್ತು ಕೆಲವು ಪ್ರತಿಪಕ್ಷಗಳವರ ಪ್ರಕಾರ ಆರ್ಯನ್ ಬಂಧನದ ಹಿಂದೆ ರಾಜಕೀಯ ಇತ್ತು. ಈ ಮೊಕದ್ದಮೆಯಲ್ಲಿ ಎನ್ ಸಿಬಿ ವಲಯಾಧಿಕಾರಿ ಸಮೀರ್ ವಾಂಖೆಡೆಯವರ ಕಳಪೆ ತನಿಖೆಯ ಬಗೆಗೆ ಕ್ರಮ ತೆಗೆದುಕೊಳ್ಳಲು ಸರಕಾರವೇ ಶಿಫಾರಸು ಮಾಡಿದೆ. “ನಾವು ದೊಡ್ಡ ದೊಡ್ಡ ಸಮಾಜದ್ರೋಹಿ ಅಪರಾಧಿಗಳನ್ನು ಹಿಡಿಯುವ ಭರದಲ್ಲಿ ಕೆಲವೊಮ್ಮೆ ಯಾರ್ಯಾರನ್ನೋ ಹಿಡಿದು, ಸಮಾಜದಲ್ಲಿ ಒಡಕು ಮೂಡಿಸುತ್ತೇವೆ” ಎಂದ ಸಂಜಯ್ ಸಿಂಗ್ ರ ಮಾತನ್ನು ಹೇಳುತ್ತ ಶಾರೂಕ್ ಖಾನ್ ಮ್ಲಾನವದನರಾಗುತ್ತಾರೆ.


ಪುತ್ರ ಜೈಲು ಸೇರಿದ ಬಳಿಕ ಬಹಳ ಚಿಂತಾಕ್ರಾಂತರಾಗಿದ್ದ ಶಾರೂಕ್ ಖಾನ್ ಈಗ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಪಠಾಣ್, ಜವಾನ್, ಡುಂಕಿ ಎಂಬ ಅವರ ಮೂರು ಚಿತ್ರಗಳು ಮುಂದಿನ ವರುಷ ತೆರೆ ಕಾಣಲಿವೆ. ಆರ್ಯನ್ ಖಾನ್ ಚಿತ್ರ ಯೋಜನೆ ಸದ್ಯ ಸ್ಥಗಿತವಾಗಿದ್ದು, ಕೆಲವು ಸ್ಟ್ರೀಮಿಂಗ್ ವೇದಿಕೆಗಳನ್ನು ಆರಂಭಿಸಿದ್ದಾರೆ. ಶಾರೂಕ್ ಖಾನ್ ರ ಮಗಳು ಸುಹಾನಾ ಖಾನ್ ಮುಂದಿನ ನೆಟ್ ಫ್ಲಿಕ್ಸ್ ‘ದ ಆರ್ಚೀಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Join Whatsapp
Exit mobile version