ಕೇಂದ್ರ ಸಂಪುಟದಲ್ಲಿ ನಮಗೆ ಸಂಪುಟ ದರ್ಜೆಯ ಸಚಿವ ಸ್ಥಾನವೇ ಬೇಕು: ಅಜಿತ್ ಪವಾರ್

Prasthutha|

ನವದೆಹಲಿ: ಲೋಕಸಭೆ ಚುನಾವಣೆ 2024ರಲ್ಲಿ ಜಯಗಳಿಸಿರುವ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

- Advertisement -

ಈ ಮಧ್ಯೆ ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಶಿವಸೇನೆ ರೀತಿ ನಮಗೂ ಕೇಂದ್ರ ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ನಾನು ಕೆಲವು ದಿನಗಳ ಕಾಲ ಕಾಯಲು ತಯಾರಾಗಿದ್ದೇನೆ. ಆದರೆ ಕೇಂದ್ರ ಸಂಪುಟದಲ್ಲಿ ನಮಗೆ ಸಂಪುಟ ದರ್ಜೆಯ ಸಚಿವ ಸ್ಥಾನವೇ ಬೇಕು ಎಂದಿದ್ದಾರೆ.

ಸದ್ಯ ನಾವು ಒಂದು ಲೋಕಸಭೆ, ಒಂದು ರಾಜ್ಯಸಭೆ ಸದಸ್ಯರನ್ನು ಒಳಗೊಂಡಿದ್ದೇವೆ. ಇನ್ನು 2-3 ತಿಂಗಳಿನಲ್ಲಿ ರಾಜ್ಯಸಭೆಯಲ್ಲಿ ನಮ್ಮ ಸದಸ್ಯ ಬಲ 3ಕ್ಕೆ ಏರಿಕೆಯಾಗುತ್ತದೆ. ಆಗ ನಮಗೆ ಕೇಂದ್ರ ಸಂಪುಟದಲ್ಲಿ ಸಂಪುಟ ದರ್ಜೆಯ ಒಂದು ಸಚಿವ ಸ್ಥಾನ ಬೇಕು ಎಂದು ಅಜಿತ್ ಪವಾರ್ ಬೇಡಿಕೆ ಇಟ್ಟಿದ್ದಾರೆ.

Join Whatsapp
Exit mobile version