Home ಟಾಪ್ ಸುದ್ದಿಗಳು ಸೇನೆಯಿಂದ ಸಿಕ್ಕ ಪರಿಹಾರದಲ್ಲಿ ನಮಗೇನೂ ಸಿಕ್ಕಿಲ್ಲ, ಸೊಸೆ ನಮ್ಮೊಂದಿಗಿಲ್ಲ: ಅಳಲು ತೋಡಿಕೊಂಡ ಹುತಾತ್ಮ ಅನ್ಶುಮನ್ ಪೋಷಕರು

ಸೇನೆಯಿಂದ ಸಿಕ್ಕ ಪರಿಹಾರದಲ್ಲಿ ನಮಗೇನೂ ಸಿಕ್ಕಿಲ್ಲ, ಸೊಸೆ ನಮ್ಮೊಂದಿಗಿಲ್ಲ: ಅಳಲು ತೋಡಿಕೊಂಡ ಹುತಾತ್ಮ ಅನ್ಶುಮನ್ ಪೋಷಕರು

ನವದೆಹಲಿ: ಕಳೆದ ವರ್ಷ ಸಿಯಾಚಿನ್ ನಲ್ಲಿ ಸೇನಾ ಬಂಕರ್ ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡದ ಹುತಾತ್ಮ ಯೋಧ ಅನ್ಶುಮನ್ ಸಿಂಗ್ ಅವರ ಪೋಷಕರು ಈಗ ಯೋಧನ ಸಾವಿನ ನಂತರ ಸಿಗುವ ಪರಿಹಾರದ ವಾರಸುದಾರರ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ಅನ್ಶುಮನ್ ಅವರಿಗೆ ಅವರ ಜೀವಮಾನದ ಶ್ರೇಷ್ಠ ತ್ಯಾಗಕ್ಕಾಗಿ ಮರಣೋತ್ತರವಾಗಿ ಕೀರ್ತಿಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು.


ಭಾರತೀಯ ಸೇನೆಯ ಎನ್ ಒಕೆ ಮಾನದಂಡದಲ್ಲಿಬದಲಾವಣೆ ಮಾಡಿ ಪೋಷಕರಾದ ತಮಗೂ ಆರ್ಥಿಕ ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ.


ಈ ಬಗ್ಗೆ ಚಾನೆಲ್ ವೊಂದರಲ್ಲಿ ಮಾತನಾಡಿದ ಅನ್ಶುಮನ್ ಸಿಂಗ್ ಅವರ ಪೋಷಕರಾದ ರವಿ ಪ್ರತಾಪ್ ಸಿಂಗ್ ಹಾಗೂ ಮಂಜು ಸಿಂಗ್, ನಮ್ಮ ಕುಟುಂಬವನ್ನು ತೊರೆದು ಹೋಗಿದ್ದಾರೆ. ಹಾಗೂ ಈಗ ನಮ್ಮ ಮಗನ ನಿಧನದ ನಂತರ ಸಿಗುವ ಎಲ್ಲ ಸವಲತ್ತುಗಳಿಗೆ ಅವರು ಮಾತ್ರ ಅರ್ಹರಾಗಿದ್ದಾರೆ. ನಮಗೆ ಗೋಡೆಯಲ್ಲಿ ನೇತು ಹಾಕಿರುವ ಮಗನ ಫೋಟೋ ಮಾತ್ರ ಈಗ ಆಸರೆಯಾಗಿದೆ ಎಂದು ಹೇಳಿದ್ದಾರೆ.


ಸೇನೆಯ ವಾರಸುದಾರಿಕೆಯ ಮಾನದಂಡ ಸರಿಯಾಗಿಲ್ಲ, ಈ ಬಗ್ಗೆ ನಾನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ. ಅನ್ಶುಮನ್ ಸಿಂಗ್ ಅವರ ಪತ್ನಿ ನಮ್ಮೊಂದಿಗೆ ವಾಸ ಮಾಡುತ್ತಿಲ್ಲ, ಮದುವೆಯಾಗಿ ಕೇವಲ 5 ತಿಂಗಳಾಗಿತ್ತಷ್ಟೇ, ಹೀಗಾಗಿ ಮಕ್ಕಳು ಕೂಡ ಆಗಿರಲಿಲ್ಲ, ಹೀಗಾಗಿ ನಮಗೀಗ ಗೋಡೆಯಲ್ಲಿ ಹೂವಿನ ಹಾರದೊಂದಿಗೆ ನೇತು ಹಾಕಿದ ಮಗನ ಫೋಟೋ ಮಾತ್ರ ಉಳಿದಿದೆ. ಹೀಗಾಗಿ ನಾವು ಎನ್ಒಕೆಗೆ ಸಂಬಂಧಿಸಿದ ಮಾನದಂಡವನ್ನು ಪರಿಶೀಲಿಸಬೇಕು ಎಂದು ಬಯಸುತ್ತೇವೆ ಎಂದು ಹೇಳಿದ್ದಾರೆ.

Join Whatsapp
Exit mobile version