Home ಟಾಪ್ ಸುದ್ದಿಗಳು ‘ದೇಶವನ್ನು ರಾಕ್ಷಸನ ಕೈಗೆ ಒಪ್ಪಿಸಿದ್ದೇವೆ’: ಮೋದಿ ವಿರುದ್ಧ ರಮೇಶ್ ಕುಮಾರ್ ಕಟು ಟೀಕೆ

‘ದೇಶವನ್ನು ರಾಕ್ಷಸನ ಕೈಗೆ ಒಪ್ಪಿಸಿದ್ದೇವೆ’: ಮೋದಿ ವಿರುದ್ಧ ರಮೇಶ್ ಕುಮಾರ್ ಕಟು ಟೀಕೆ

ಚಿಕ್ಕಬಳ್ಳಾಪುರ: ದೇಶವನ್ನು ರಾಕ್ಷಸನ ಕೈಗೆ ಒಪ್ಪಿಸಿದ್ದೇವೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಂತಾಮಣಿಯಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ಈ ದೇಶವನ್ನು ಒಬ್ಬ ರಾಕ್ಷಸನ ಕೈಗೆ ಒಪ್ಪಿಸಿದ್ದೇವೆ. ಭಾರತ ದೇಶ ಮೋದಿಯ ಕೈಗೆ ಸಿಕ್ಕಿ ನಲುಗಿ ಹೋಗಿದೆ ಎಂದು ಆರೋಪಿಸಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ ತೆಲುಗು ಭಾಷಿಗರು ಹೆಚ್ಚಿರುವ ಕಾರಣ ಸ್ಥಳೀಯರಿಗೆ ಅರ್ಥ ಆಗುವಂತೆ ರಮೇಶ್ ಕುಮಾರ್ ತೆಲುಗಿನಲ್ಲಿಯೇ ಭಾಷಣ ಮಾಡಿದ್ದಾರೆ.

ನೋಟ್ ಬ್ಯಾನ್ ಮಾಡಿ ಹಲವಾರು ಜನ ಬೀದಿಗೆ ಬಂದರು. ಕೂಲಿ ಕಾರ್ಮಿಕರು, ಫುಟ್ ಪಾತ್ ನಲ್ಲಿ ಮಲಗುವವರು ಚಿಲ್ಲರೆ ಹಣ ಸಿಗದೆ ಸತ್ತುಹೋದರು. ಜನರು ಹಸಿವಿನಿಂದ ಸಾಯುವ ಸ್ಥಿತಿಗೆ ಬಂದಿತ್ತು. ಈ ಬಗ್ಗೆ ನಾವು ಪ್ರಶ್ನೆ ಮಾಡಿದರೆ ಟಿವಿಗಳ ಮುಂದೆ ಮೇಕಪ್ ಹಾಕಿಕೊಂಡು ಬಂದುಬಿಡ್ತಾರೆ. ಭಾರತ್ ಮಾತಾಕೀ ಅಂತ ಘೋಷಣೆ ಕೂಗಿ ಮರುಳು ಮಾಡ್ತಾರೆ. ಭಾರತವನ್ನು ಏನು ಇವರಿಗೆ ಗುತ್ತಿಗೆ ಕೊಟ್ಟಿದ್ದೇವಾ ಎಂದು ರಮೇಶ್ ಕುಮಾರ್ ಕಿಡಿ ಕಾರಿದ್ದಾರೆ.

ದೇಶದ ಎಲೆಕ್ಷನ್ ನಲ್ಲಿ ಗೆದ್ದು ಪ್ರಧಾನಿಯಾಗುವುದಕ್ಕೆ ಆಸ್ಪದ ಮಾಡಿಕೊಟ್ಟಿದ್ದು ಕಾಂಗ್ರೆಸ್. ಈ ದೇಶದಲ್ಲಿ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯ, ಜನರಿಗೆ ನೆಮ್ಮದಿಯ ಬದುಕು ಕೊಟ್ಟಿದ್ದು ಕಾಂಗ್ರೆಸ್. ಆದರೆ ಇವರು ಕಾಂಗ್ರೆಸ್ ಏನೂ ಮಾಡೇ ಇಲ್ಲ ಎನ್ನುತ್ತಿದ್ದಾರೆ. ನನಗೆ ಎಷ್ಟು ಆಯಸ್ಸು ಇದೆಯೋ ಗೊತ್ತಿಲ್ಲ. ಆದರೆ ಇಲ್ಲಿಂದ ಕಣ್ಣು ಮುಚ್ಚುವ ಒಳಗೆ ಬಿಜೆಪಿ ಪೂರ್ತಿ ಸರ್ವನಾಶ ಆಗಬೇಕು ಎಂದು ಅವರು ಶಾಪ ಹಾಕಿದ್ದಾರೆ.

Join Whatsapp
Exit mobile version