Home ಟಾಪ್ ಸುದ್ದಿಗಳು ಶಾಲೆಗಳಲ್ಲಿ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧಾರ: ಮಧು ಬಂಗಾರಪ್ಪ

ಶಾಲೆಗಳಲ್ಲಿ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧಾರ: ಮಧು ಬಂಗಾರಪ್ಪ

ಬೆಂಗಳೂರು: ಶಾಲೆಗಳಲ್ಲಿ ವಾರಕ್ಕೆ 2 ಮೊಟ್ಟೆ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.

ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಹಿಂದಿನ ಸರ್ಕಾರ ವಾರದಲ್ಲಿ ಒಂದೇ ಮೊಟ್ಟೆ ಕೊಡ್ತಿತ್ತು. ಮೊಟ್ಟೆ, ಚಿಕ್ಕಿ ಬಾಳೆ ಹಣ್ಣು ಕೊಡೊವುದರಿಂದ ಮಾರ್ಜಿನಲ್ ಹೆಲ್ಪ್ ಆಗಿದೆ ಅಷ್ಟೇ. ಶಿಕ್ಷಣ ವ್ಯವಸ್ಥೆಯಲ್ಲಿ ಇರುವ ಸಮಸ್ಯೆ ಮಾನ್ಯ ಮುಖ್ಯಮಂತ್ರಿಗಳಿಗೆ ಗೊತ್ತು. ಹೀಗಾಗಿ ನಾನು ಅವರ ಬಳಿ ಮನವಿ ಮಾಡಿದೆ ಎಂದರು.

ನಾನು ಅಧಿಕಾರಕ್ಕೆ ಬಂದಾಗ ನನ್ನ ಕ್ಷೇತ್ರದಲ್ಲಿ 52 ಶಾಲೆಯಲ್ಲಿ ಶಿಕ್ಷಕರೇ ಇರಲಿಲ್ಲ. ಎಷ್ಟೋ ಪೋಷಕರು ಖಾಸಗಿ ಶಾಲೆಗೆ ಮಕ್ಕಳನ್ನ ಸೇರಿಸುತ್ತಾರೆ. ನಾವು ಮುಂದಿನ ಎಂಟು ತಿಂಗಳ ಒಳಗೆ ಕೆಲವೊಂದಿಷ್ಟು ಪ್ಲಾನ್ ಮಾಡಿಕೊಂಡಿದ್ದೇವೆ. ಈ ವ್ಯವಸ್ಥೆ ಯಾವ ತರ ನಡೆಯುತ್ತೆ ಅನ್ನೋದನ್ನ ನಾನು ಕೂಡ ಈಗ ತಿಳಿದು ಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ವಾರಕ್ಕೆ 2 ಮೊಟ್ಟೆ ಕೊಡುವ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಂಡಿದ್ದೆ. ಸಿಎಂ ಸಿದ್ದರಾಮಯ್ಯ ಅಚರು ಒಪ್ಪಿಗೆ ನೀಡಿ ವಾರಕ್ಕೆ 2 ಮೊಟ್ಟೆ ನೀಡಲು ಅನುಮೋದಿಸಿದ್ದಾರೆ. ಎಸ್ ಡಿಎಮ್ ಸಿ ಅವರಿಗೆ ಎಲ್ಲಾ ಅಧಿಕಾರ ಕೊಟ್ಟಿದ್ದೇವೆ ಎಂದರು.

Join Whatsapp
Exit mobile version