ಈ ರಾಜ್ಯಪಾಲ ನಮಗೆ ಬೇಕಾಗಿಲ್ಲ: ಕೋಶ್ಯಾರಿ ವಿರುದ್ಧ ಶಿವಸೇನೆ ಶಾಸಕ ಆಕ್ರೋಶ

Prasthutha|

ಮುಂಬೈ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ವಿರುದ್ಧ ಅಸಮಾಧಾನ ತೀವ್ರವಾಗತೊಡಗಿದ್ದು, ಆಡಳಿತರೂಢ ಬಾಳಾ ಸಾಹೇಬಾಂಚಿ ಶಿವಸೇನೆಯೂ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಆಡಳಿತಾರೂಢ ಬಾಳಾಸಾಹೇಬಾಂಚಿ ಶಿವಸೇನಾ (ಏಕನಾಥ ಶಿಂದೆ ಬಣ)ದ ಬುಲ್ದಾನ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್ ರಾಜ್ಯಪಾಲ ಕೊಶ್ಯಾರಿ ಅವರನ್ನು ರಾಜ್ಯದ ಹೊರಗೆ ಕಳುಹಿಸಿ ಎಂದು ಹೇಳಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಪಾದನೆಗಳು, ಚಿಂತನೆಗಳು ಯಾವತ್ತೂ ಹಳತಾಗುವುದಿಲ್ಲ. ಅವರನ್ನು ಪ್ರಪಂಚದ ಯಾವುದೇ ಗಣ್ಯ ವ್ಯಕ್ತಿಗಳಿಗೆ ಹೋಲಿಕೆ ಮಾಡಲಾಗದು. ಅವರನ್ನು ಹಳೆಯ ಐಕಾನ್ ಎನ್ನುವುದು ರಾಜ್ಯದ ಇತಿಹಾಸ ಹಾಗೂ ಅದು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯದ ಕಾರಣವಾಗಿದೆ. ಇಂತಹ ರಾಜ್ಯಪಾಲರನ್ನು ರಾಜ್ಯದಿಂದ ಬೇರೆ ಎಲ್ಲಾದರೂ ಹೊರಗೆ ಕಳುಹಿಸಬೇಕು ಎಂದು ನಾನು ಬಿಜೆಪಿ ನಾಯಕರನ್ನು ಹಾಗೂ ಕೇಂದ್ರ ಸರ್ಕಾರವನ್ನು ಕೋರುತ್ತೇನೆ ಎಂದು ಗಾಯಕ್ವಾಡ್ ಹೇಳಿದ್ದಾರೆ.

- Advertisement -

ಶನಿವಾರ ಔರಂಗಾಬಾದ್’ನಲ್ಲಿ ನಡೆದ, ಎನ್’ಸಿಪಿ ನಾಯಕ ಶರದ್ ಪವಾರ್ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಗೌರವ ಡಿ.ಲಿಟ್ ಪದವಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲರು ಛತ್ರಪತಿ ಶಿವಾಜಿ ಮಹಾರಾಜರು ಹಳೇ ಕಾಲದ ಐಕಾನ್ ಎಂದು ಹೇಳಿದ್ದರು.

Join Whatsapp
Exit mobile version