Home ಟಾಪ್ ಸುದ್ದಿಗಳು ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ, ಬಿಜೆಪಿಯಲ್ಲಿ ನೊಂದು ಕಾಂಗ್ರೆಸ್​​​ಗೆ ಬರುತ್ತಿದ್ದಾರೆ ಅಷ್ಟೇ : ಸಲೀಂ ಅಹ್ಮದ್

ಆಪರೇಷನ್ ಹಸ್ತದ ಅವಶ್ಯಕತೆ ನಮಗಿಲ್ಲ, ಬಿಜೆಪಿಯಲ್ಲಿ ನೊಂದು ಕಾಂಗ್ರೆಸ್​​​ಗೆ ಬರುತ್ತಿದ್ದಾರೆ ಅಷ್ಟೇ : ಸಲೀಂ ಅಹ್ಮದ್

ಹುಬ್ಬಳ್ಳಿ: ನಮಗೆ ಆಪರೇಷನ್​ ಹಸ್ತದ ಅವಶ್ಯಕತೆಯೇ ಇಲ್ಲ, ಬಿಜೆಪಿಯಲ್ಲಿ ನೊಂದು ಕಾಂಗ್ರೆಸ್​​​ಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ಕೆಲವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಶಾಸಕರು, ಹಿರಿಯ ಮುಖಂಡರು ಕಾಂಗ್ರೆಸ್​ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.

ಸರ್ಕಾರ ಬಂದ 100 ದಿನದ ಸಂಭ್ರಮದಲ್ಲಿ ಗೃಹಲಕ್ಷ್ಮೀಗೆ ಚಾಲನೆ ಕುರಿತು ಮಾತನಾಡಿದ ಅವರು ‘ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್​​ನಲ್ಲಿ 5ನೇ ಗ್ಯಾರಂಟಿ ಜಾರಿ ಜಾರಿಯಾಗಲಿದೆ. ನಾವು ನುಡಿದಂತೆ ನಡೆದಿದ್ದೇವೆ. ಶಕ್ತಿ ಯೋಜನೆ ಅಡಿ ಜೂನ್ 11ರಿಂದ ಇಂದಿನವರೆಗೆ 50 ಕೋಟಿ ಮಹಿಳೆಯರ ಪ್ರಯಾಣ ಮಾಡಿದ್ದಾರೆ. ನಾವು ಘೋಷಿಸಿದ್ದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ​ಕಳೆದ 9 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಏನು ಮಾಡಿದೆ. ಇಷ್ಟು ಬೇಗ ಗ್ಯಾರಂಟಿ ಜಾರಿಗೆ ತರುತ್ತಾರೆಂದು ಬಿಜೆಪಿ ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿಯವರು ವಿಪಕ್ಷ ನಾಯಕನ ಆಯ್ಕೆಯೇ ಮಾಡಲಿಲ್ಲ. ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ದಿಕ್ಕೆಟ್ಟು ಹೋಗಿದೆ. ರಸ್ತೆಯಲ್ಲಿ ನಿಂತು ಪ್ರಧಾನಿ ನೋಡೋಕೆ ಹೋಗಿದ್ದಾರೆ. ಆದ್ರೆ, ಮೋದಿ ಅವರನ್ನು ನೋಡಲೇ ಇಲ್ಲ. ಇದು ಮೋದಿ ಅವರು ಮಾಡಿದ ಕಪಾಳ ಮೋಕ್ಷ ಎಂದು ಬಿಜೆಪಿ ನಾಯಕರಿಗೆ ಟೀಕಿಸಿದ್ದಾರೆ.

Join Whatsapp
Exit mobile version