Home ಟಾಪ್ ಸುದ್ದಿಗಳು ಕಾಂಗ್ರೆಸ್ ಅನ್ನು ನಾವು ದುರ್ಬಲ ಎಂದು ಪರಿಗಣಿಸಲ್ಲ: ಸಿ.ಟಿ.ರವಿ

ಕಾಂಗ್ರೆಸ್ ಅನ್ನು ನಾವು ದುರ್ಬಲ ಎಂದು ಪರಿಗಣಿಸಲ್ಲ: ಸಿ.ಟಿ.ರವಿ

ಚಿಕ್ಕಮಗಳೂರು: ಕಾಂಗ್ರೆಸ್ ಅನ್ನು ನಾವು ದುರ್ಬಲ ಎಂದು ಪರಿಗಣಿಸಲ್ಲ. ಕಾಂಗ್ರೆಸ್ ನಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲದೆ ಇರಬಹುದು. ಬಿಜೆಪಿ ವಿರೋಧಿ ಮತಗಳು ಕಾಂಗ್ರೆಸ್ಸಿಗೆ ಹೋಗುತ್ತದೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.


ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧ ಮತ್ತು ಚುನಾವಣೆಯನ್ನು ಹಗುರವಾಗಿ ಪರಿಗಣಿಸಲ್ಲ. ಗಂಭೀರವಾಗಿ ತೆಗೆದುಕೊಂಡು ಗಂಭೀರವಾಗಿ ಎದುರಿಸಬೇಕು.

ಮೇಲ್ನೋಟಕ್ಕೆ ಎಲ್ಲಾ ಕಡೆ ಮೋದಿ ಪರ ಅಲೆ ಇರುವುದು ಅರ್ಥವಾಗುತ್ತಿದೆ. ಕಳೆದ ಬಾರಿ ಕಾಂಗ್ರೆಸ್ಗೆ ವೋಟ್ ಹಾಕಿದವರು ದೇಶಕ್ಕಾಗಿ ಮೋದಿಗೆ ವೋಟ್ ಹಾಕುತ್ತೇವೆ ಎನ್ನುತ್ತಿದ್ದಾರೆ ಎಂದರು.
ಕಾಂಗ್ರೆಸ್ಸಿನಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್ಸಿಗೆ ಒಂದಿಷ್ಟು ಮತ ಇದೆ ಎನ್ನುವುದನ್ನು ಮರೆಯುವ ಹಾಗಿಲ್ಲ ಎಂದು ಹೇಳಿದರು

Join Whatsapp
Exit mobile version