ಕ್ರೈಸ್ತರ ಮನೆಗೆ ನುಗ್ಗಿ ದಾಂಧಲೆ ನಡೆಸಿ ಬೆಂಕಿ ಹಚ್ಚಿದ ಸಂಘಪರಿವಾರ

Prasthutha|

ಭೋಪಾಲ್: ಕ್ರೈಸ್ತ ಸಮುದಾಯಕ್ಕೆ ಸೇರಿದ ಲಾಲು ಟೋಲಿಯಾ ವಖಾಲಾ ಎಂಬವರ ಮನೆಗೆ ಅಕ್ರಮವಾಗಿ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು, ಅಲ್ಲಿ ದಾಂಧಲೆ ನಡೆಸಿ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಂಘಪರಿವಾರದ ಈ ದುಷ್ಕೃತ್ಯದಿಂದಾಗಿ ತಿನ್ನಲು ಆಹಾರ ಅಥವಾ ಧರಿಸಲು ಬಟ್ಟೆ ಇಲ್ಲದೆ ನಿರಾಶ್ರಿತರಾಗಿದ್ದೇವೆ ಎಂದು ಸಂತ್ರಸ್ತ ಲಾಲು ಟೋಲಿಯಾ ಆರೋಪಿಸಿದ್ದಾರೆ.

- Advertisement -

ದಶಕದಿಂದ ಕ್ರಿಶ್ಚಿಯನ್ ಧರ್ಮದ ಅನುಯಾಯಿಯಾಗಿ ಜೀವಿಸುತ್ತಿರುವ ಹಿನ್ನೆಲೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಈ ರೀತಿಯ ಕಿರುಕುಳ ನೀಡಿದ್ದಾರೆ ಎಂದು ಅವರು ದೂರಿದ್ದಾರೆ.

ಸಂಘಪರಿವಾರದ ಕಾರ್ಯಕರ್ತರು ಲಾಲು ಅವರ ಮನೆಯನ್ನು ಸುಟ್ಟು ಹಾಕಿದ ಹಿನ್ನೆಲೆಯಲ್ಲಿ ಮನೆ, ಸಂಗ್ರಹಿಸಿದ ವಸ್ತು ಮತ್ತು ನಗದು ಸೇರಿದಂತೆ ಅಪಾರ ಪ್ರಮಾಣದ ಆಸ್ತಿ – ಪಾಸ್ತಿಗಳನ್ನು ಕಳೆದು ಕೊಳ್ಳಬೇಕಾಯಿತು ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

- Advertisement -

ಲಾಲು ಮತ್ತು ಕುಟುಂಬ ಸುಮಾರು 15 ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಮಾತ್ರವಲ್ಲ ಕ್ರಿಶ್ಚಿಯನ್ ಧರ್ಮ ತೊರೆಯುವಂತೆ ಸಂಘಪರಿವಾರದ ಕಾರ್ಯಕರ್ತರು ಹಲವು ಬಾರಿ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ವ್ಯಕ್ತಿಯನ್ನು ಬಂಧಿಸಿಲ್ಲ ಎಂದು ಲಾಲು ಆರೋಪಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಕ್ರೈಸ್ತರ ವಿರುದ್ಧ ನಿರಂತರ ದಾಳಿಗಳು ವರದಿಯಾಗುತ್ತಲೇ ಇದೆ.

Join Whatsapp