ನವದೆಹಲಿ : ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡದ ಫಾರ್ವರ್ಡ್ ಆಟಗಾರ್ತಿ ವಂದನಾ ಕಟಾರಿಯಾ ಅವರು ಜಾತಿವಾದಿಗಳು ಅವಹೇಳನವನ್ನು ಕೊನೆಗೊಳಿಸಬೇಕೆಂದು ಹಾರೈಸಿದರು.
ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವು ಸೆಮಿಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡದ ವಿರುದ್ಧ ಸೋತ ಹಿನ್ನೆಲೆಯಲ್ಲಿ ಹರಿದ್ವಾರದ ಕೆಲವು ಯುವಕರ ಗುಂಪು ವಂದನಾ ಮನೆಯ ಎದುರಲ್ಲಿ ಪಟಾಕಿ ಸಿಡಿಸಿ ನೃತ್ಯ ಮಾಡಿ ಸಂಭ್ರಮಿಸಿತ್ತು. ಮಾತ್ರವಲ್ಲದೇ ಜಾತಿವಾದಿಗಳು ವಂದನಾ ವಿರುದ್ಧ ಟೀಕೆಯನ್ನು ಹರಿಯಬಿಟ್ಟಿದ್ದರು. ಈ ಘಟನೆಯ ಕುರಿತ ದೂರಿನ ಮೇರೆಗೆ ಪೊಲೀಸರು ಗುರುವಾರ ಪ್ರಮುಖ ಆರೋಪಿ ವಿಜಯಪಾಲ್ ಮತ್ತು ಇಬ್ಬರು ಸ್ನೇಹಿತರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷಣ್ 504, ಎಸ್.ಸಿ/ಎಸ್.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ವಿಜಯ್ ಪಾಲ್, ಅಂಕುರ್ ಪಾಲ್ ಮತ್ತು ಸುಮಿತ್ ಚೌಹಾಣ್ ಅವರನ್ನು ಬಂಧಿಸಲಾಗಿದೆ. ಅದೇ ರೀತಿಯಲ್ಲಿ ಇನ್ನಿತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೆಂದು ಸಿಡ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾರತ, ಬ್ರಿಟನ್ ಪಂದ್ಯಾಟದಲ್ಲಿ 4-3 ಗೋಲುಗಳ ಅಂತರದ ಸೋಲಿನ ನಂತರ ವಂದನಾ ಅವರ ಮನೆಯಲ್ಲಿ ನಡೆದ ಘಟನೆಯ ಕುರಿತು ವಿಚಾರಿಸಿದಾಗ, ನಾನು ಈ ಘಟನೆಯ ಕುರಿತು ಕುಟುಂಬದ ಜೊತೆ ಇನ್ನು ಮಾತನಾಡಿಲ್ಲವೆಂದು ಹೇಳಿದರು. ತನ್ನ ಕುಟುಂಬಕ್ಕೆ ಏನಾದರೂ ಸಂದೇಶಗಳಿದೆಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಂದನಾ ಅವರು, ನಾವು ದೇಶಕ್ಕಾಗಿ ಆಡುತ್ತಿದ್ದೇವೆ ಮತ್ತು ಜಾತೀಯತೆ ಕುರಿತು ವಿಮರ್ಶನೆ ವಿಜೃಂಭಿಸಬಾರದು. ಅದೇ ರೀತಿ ಜಾತೀಯತೆ ಬಗ್ಗೆ ನಾನು ಈ ಹಿಂದೆ ಸ್ವಲ್ಪಮಟ್ಟಿಗೆ ಕೇಳಿದ್ದೆ, ಆದರೆ ಈಗ ವಯಕ್ತಿಕ ಅನುಭವವಾಗಿದೆಯೆಂದರು. ಮಾತ್ರವಲ್ಲದೆ, ನಾವು ಹಾಕಿಯ ಬಗ್ಗೆ ಮಾತ್ರ ಯೋಚಿಸಬೇಕಾಗಿದೆ. ಯುವತಿಯರಾದ ನಾವು ದೇಶಕ್ಕಾಗಿ ಆಡುತ್ತಿರುವುದರಿಂದ ನಾವು ಒಂದಾಗಬೇಕೆಂದು ಕರೆ ನೀಡಿದರು.