ಹಿಂದುತ್ವವಾದಿಗಳಿಂದ ಮುಸ್ಲಿಮ್ ವಿರೋಧಿ ಘೋಷಣೆ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

Prasthutha|

ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ಮುಸ್ಲಿಮ್ ವಿರೋಧಿ ಘೋಷಣೆಯನ್ನು ಕೂಗಿದ ಹಿಂದುತ್ವ ಗುಂಪಿನ ಅಧ್ಯಕ್ಷನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ.

- Advertisement -

ಅರ್ಜಿದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಾದೀಶರು ಈ ಪ್ರಚೋದನಕಾರಿ ಘೋಷಣೆ ಮೊಳಗಿಸಲು ಇದು ತಾಲಿಬಾನ್ ರಾಷ್ಟ್ರವಲ್ಲ. ವೈವಿಧ್ಯತೆ ಮತ್ತು ಏಕತೆ ಸಾರುವ ಬಹು ಸಂಸ್ಕೃತಿಯ ಭಾರತದಲ್ಲಿ ಇಂಹತ ಕೋಮು ಪ್ರಚೋದನಕಾರಿ ಘೋಷಣೆ ಅಸಂಬದ್ದವೆಂದು ಹೇಳಿದ್ದಾರೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅನಿಲ್ ಆಂಟಿಲ್ ಅವರು ಹಿಂದೂ ರಕ್ಷಾ ದಳದ ಅಧ್ಯಕ್ಷ ಭೂಪಿಂದರ್ ತೋಮರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಹಿಂದೆ ಇಂತಹ ಘಟನೆಯಿಂದಾಗಿ ಕೋಮು ಉದ್ವಿಗ್ನತೆ ಭುಗಿಲೆದ್ದು, ಗಲಭೆಯ ಮೂಲಕ ಅನೇಕ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗಿರುವ ಹಿನ್ನೆಲೆಯಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆಯೆಂದು ನ್ಯಾಯಾಧೀಶರು ತಿಳಿಸಿದರು.

- Advertisement -

ಆಗಸ್ಟ್ 8 ರಂದು ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ತೋಮರ್ ಅವರು ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಘೋಷಣೆಗಳನ್ನು ಮೊಳಗಿಸಿ ಯುವಕರನ್ನು ಪ್ರಚೋದಿಸಿದ್ದಾನೆ ಎಂಬ ಆರೋಪದಲ್ಲಿ ತೋಮರ್ ನನ್ನು ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅರೆಸ್ಟ್ ಆಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.

ಪ್ರಸಕ್ತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಗುಂಪಿನ ಸುಶೀಲ್ ತಿವಾರಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದಾನೆ. ಮುಸ್ಲಿಮರಿಗೆ ಅತ್ಯಂತ ಕಟು ಭಾಷೆಯಲ್ಲಿ ಅವಹೇಳನ ಮಾಡಿದ ಆರೋಪದಲ್ಲಿ ತಿವಾರಿಯನ್ನು ಬಂಧಿಸಲಾಗಿದೆ. ಆ ಸಭೆಯಲ್ಲಿ ತಿವಾರಿ ಮುಸ್ಲಿಮರನ್ನು ಜನಾಂಗೀಯ ಹತ್ಯೆ ನಡೆಸಲು ಹಿಂದುತ್ವವಾದಿಗಳಿಗೆ ಕರೆ ನೀಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿವಾರಿಯನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ



Join Whatsapp