Home ಟಾಪ್ ಸುದ್ದಿಗಳು 2b ಕೆಟಗರಿಯನ್ನು ರದ್ದುಪಡಿಸಿದ ಕರ್ನಾಟಕ ಸರ್ಕಾರವನ್ನು ನಾವು ಕೋರ್ಟಿಗೆ ಎಳೆದು ಸೋಲಿಸಲಿದ್ದೇವೆ: ಇಲ್ಯಾಸ್ ಮುಹಮ್ಮದ್ ತುಂಬೆ...

2b ಕೆಟಗರಿಯನ್ನು ರದ್ದುಪಡಿಸಿದ ಕರ್ನಾಟಕ ಸರ್ಕಾರವನ್ನು ನಾವು ಕೋರ್ಟಿಗೆ ಎಳೆದು ಸೋಲಿಸಲಿದ್ದೇವೆ: ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಕೆ

ಬೆಂಗಳೂರು: ಮುಸ್ಲಿಮರ ಮೀಸಲಾತಿ 2b ಕೆಟಗರಿ ರದ್ದುಮಾಡಿ ರಾಜ್ಯ ಮತ್ತು ಸಂವಿಧಾನಕ್ಕೆ ದ್ರೋಹ ಮಾಡಿದ ಬಿಜೆಪಿ ಸರಕಾರಕ್ಕೆ ಧಿಕ್ಕಾರ. ಬಿಜೆಪಿ ಧ್ವಂಸ ಮತ್ತು ದ್ವೇಷ ಮಾತ್ರ ಕಲಿತಿದೆ. ಅದು ಪತನದ ಹಾದಿಯಲ್ಲಿದೆ. ಇನ್ನೊಂದು ದೀರ್ಘ ಹೋರಾಟಕ್ಕೆ ಸಿದ್ಧರಾಗೋಣ. ನ್ಯಾಯಾಲಯದಲ್ಲಿ ಬಿಜೆಪಿಯನ್ನು ಖಂಡಿತಾ ಮಣ್ಣು ಮುಕ್ಕಿಸಲಿದ್ದೇವೆ ಎಂದು ಎಸ್’ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮುಸ್ಲಿಮರ ಮೀಸಲಾತಿ 2b ಕ್ಯಾಟಗರಿಯನ್ನು ರದ್ದುಪಡಿಸಿದ ಕರ್ನಾಟಕ ಸರ್ಕಾರವನ್ನು ನಾವು ಕೋರ್ಟಿಗೆ ಎಳೆದು ಸೋಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version