Home ಟಾಪ್ ಸುದ್ದಿಗಳು ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ನಾವು ಏಕಾಂಗಿಯಾಗಿದ್ದೇವೆ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ

ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ನಾವು ಏಕಾಂಗಿಯಾಗಿದ್ದೇವೆ: ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ

ಕೀವ್: ರಷ್ಯಾದ ವಿರುದ್ದ ನಮ್ಮೊಂದಿಗೆ ನಿಂತು ಹೋರಾಡಲು ಯಾರು ಸಿದ್ದರಿದ್ದಾರೆ?  ನಮ್ಮ ಪರ ಹೋರಾಟಕ್ಕೆ ನಿಲ್ಲುವ ಯಾರೂ ಕಾಣಿಸುತ್ತಿಲ್ಲ. ಉಕ್ರೇನ್ ಗೆ ನ್ಯಾಟೊ ಸದಸ್ಯತ್ವದ ಖಾತರಿ ನೀಡಲು ಯಾರು ಸಿದ್ದರಾಗಿದ್ದಾರೆ? ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ನಾವು ಏಕಾಂಗಿಯಾಗಿದ್ದೇವೆ  ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಹೇಳಿದರು.

“ಶತ್ರು ರಾಷ್ಟ್ರ ರಷ್ಯಾ ನನ್ನನ್ನುಮತ್ತು ನನ್ನ ಕುಟುಂಬವನ್ನು ಗುರಿಯಾಗಿಸಿದೆ. ರಾಷ್ಟ್ರದ ಮುಖ್ಯಸ್ಥನನ್ನು ಮುಗಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶ ಮಾಡಲು ರಷ್ಯಾ  ಬಯಸುತ್ತಿದೆ. ನಾನು ರಾಜಧಾನಿಯಲ್ಲಿ ಉಳಿಯುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ’’ ಎಂದು ಝೆಲೆನ್ ಸ್ಕಿ ವೀಡಿಯೊ ಸಂದೇಶದಲ್ಲಿ ಹೇಳಿದರು.

ಎರಡನೆಯ ಮಹಾಯುದ್ಧದ ನಂತರ ಯುರೋಪಿಯನ್ ರಾಜ್ಯದ ಮೇಲೆ ನಡೆದ ಅತಿದೊಡ್ಡ ದಾಳಿಯಲ್ಲಿ ರಾಜಧಾನಿಯತ್ತ ಮುನ್ನುಗ್ಗುತ್ತಿರುವ ರಷ್ಯಾದ ಆಕ್ರಮಣಕಾರರ ವಿರುದ್ಧ ತನ್ನ ಪಡೆಗಳು ಹೋರಾಡುತ್ತಿರುವಾಗ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ತಾನು ಕೀವ್ ನಲ್ಲಿ ಉಳಿಯುವುದಾಗಿ ಶುಕ್ರವಾರ ಪ್ರತಿಜ್ಞೆ ಮಾಡಿದರು.

ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಯುದ್ಧ ಘೋಷಣೆಯ ನಂತರ ರಷ್ಯಾ ಗುರುವಾರ ಭೂ, ವಾಯು ಹಾಗೂ  ಸಮುದ್ರ ಮಾರ್ಗದ ಮೂಲಕ ತನ್ನ ಆಕ್ರಮಣವನ್ನು ಆರಂಭಿಸಿದೆ. ಪ್ರಮುಖ ನಗರಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಯಿಂದಾಗಿ ಅಂದಾಜು 100,000 ಜನರು ಪಲಾಯನಗೈದಿದ್ದು, ಹಲವು ಸಾವು ನೋವುಗಳು ಉಂಟಾಗಿವೆ ಎಂದು ವರದಿಗಳು ತಿಳಿಸುತ್ತವೆ.

Join Whatsapp
Exit mobile version