Home ಟಾಪ್ ಸುದ್ದಿಗಳು ನಮ್ಮದು ಮಹಿಳಾಪ್ರಿಯ ಸರ್ಕಾರ, ಮದ್ಯದಂಗಡಿಗೆ ನನ್ನದೂ ವಿರೋಧವಿದೆ: ಲಕ್ಷ್ಮಿ ಹೆಬ್ಬಾಳ್ಕರ್

ನಮ್ಮದು ಮಹಿಳಾಪ್ರಿಯ ಸರ್ಕಾರ, ಮದ್ಯದಂಗಡಿಗೆ ನನ್ನದೂ ವಿರೋಧವಿದೆ: ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು: ನಮ್ಮದು ಮಹಿಳಾಪ್ರಿಯ ಸರ್ಕಾರ. ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.


ಮದ್ಯದಂಗಡಿಗಳಿಗೆ ಹೆಚ್ಚುವರಿ ಅನುಮತಿ ಕೊಡಲ್ಲ ಎಂಬ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್ಚು ಅನುಮತಿ ಕೊಡುವುದಕ್ಕೆ ನಮ್ಮ ವಿರೋಧ ಇದೆ. ಮಹಿಳಾ ಸಬಲೀಕರಣಕ್ಕೆ ಇಷ್ಟೆಲ್ಲಾ ಒತ್ತು ಕೊಟ್ಟು ಇದರ ಮಧ್ಯೆ ಜನಸಂಖ್ಯೆ ಆಧಾರಿತವಾಗಿ ಮದ್ಯದಂಗಡಿ ಹೆಚ್ಚಳಕ್ಕೆ ಸರ್ಕಾರದ ಭಾಗವಾದರೂ ನಾನು ವಿರೋಧ ಇದ್ದೇನೆ ಎಂದರು.

ಮಹಿಳೆಯರು ಕೂಡ ಇದನ್ನ ಇಷ್ಟಪಡಲ್ಲ. ನಮ್ಮದು ಮಹಿಳಾಪ್ರಿಯ ಸರ್ಕಾರ. ಕಾಂಗ್ರೆಸ್ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಇಂತಹ ನಿರ್ಧಾರಕ್ಕೆ ನಮ್ಮ ವಿರೋಧ ಇದೆ. ಸಿಎಂ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Join Whatsapp
Exit mobile version