ಬೆಂಗಳೂರು: ಶಕ್ತಿ ಯೋಜನೆಯನ್ನು ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು ಶಕ್ತಿ ಯೋಜನೆ ಮುಂದುವರೆಸೋ ಅನಿವಾರ್ಯ ಇದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದ ಮುಂಭಾಗದಲ್ಲಿ ನಡೆದ 148 ಬಸ್ಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ. ಸದ್ಯ KSRTC ಯಲ್ಲಿ ಕರ್ತವ್ಯದಲ್ಲಿ ಮೃತ ನೌಕರರಿಗೆ 1 ಕೋಟಿ ವಿಮೆ ನೀಡಲಾಗುತ್ತಿದೆ. ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.