ಶಕ್ತಿ ಯೋಜನೆಯನ್ನು ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ಶಕ್ತಿ ಯೋಜನೆಯನ್ನು ಕಷ್ಟದಲ್ಲೇ ಒಪ್ಪಿಕೊಂಡಿದ್ದೇವೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು ಶಕ್ತಿ ಯೋಜನೆ ಮುಂದುವರೆಸೋ ಅನಿವಾರ್ಯ ಇದೆ ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.

- Advertisement -


ವಿಧಾನಸೌಧದ ಮುಂಭಾಗದಲ್ಲಿ ನಡೆದ 148 ಬಸ್ಗಳ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ. ಸದ್ಯ KSRTC ಯಲ್ಲಿ ಕರ್ತವ್ಯದಲ್ಲಿ ಮೃತ ನೌಕರರಿಗೆ 1 ಕೋಟಿ ವಿಮೆ ನೀಡಲಾಗುತ್ತಿದೆ. ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.

Join Whatsapp