Home ಟಾಪ್ ಸುದ್ದಿಗಳು ವಯನಾಡ್ ಭೂಕುಸಿತ: ಕರ್ನಾಟಕ ಮೂಲದ ಎಂಟು ಮೃತದೇಹಗಳು ಪತ್ತೆ

ವಯನಾಡ್ ಭೂಕುಸಿತ: ಕರ್ನಾಟಕ ಮೂಲದ ಎಂಟು ಮೃತದೇಹಗಳು ಪತ್ತೆ

ಮೈಸೂರು: ಕೇರಳದ ವಯನಾಡು ಜಿಲ್ಲೆಯಲ್ಲಿ ಗುಡ್ಡ ಕುಸಿದ ನಾಲ್ಕು ದಿನಗಳ ನಂತರ ದುರಂತದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ 9 ಜನರ ಪೈಕಿ 8 ಶವ ಪತ್ತೆ ಆಗಿದೆ.


ಸುಮಾರು 60 ವರ್ಷಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದ ಮಾದೇವಿ ಎಂಬುವವರ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಮೃತಪಟ್ಟಿದ್ದಾರೆ. ಸವಿತಾ ಎಂಬುವವರ ಶವಕ್ಕಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸಿದ್ದಾರೆ.


ಮೈಸೂರು ಮೂಲದ ಗುರುಮಲ್ಲನ್(60), ಸಾವಿತ್ರಿ(54), ಶಿವಣ್ಣ(50), ಅಪ್ಪಣ್ಣ(39), ಅಶ್ವಿನಿ(13), ಜೀತು(11), ದಿವ್ಯಾ(35), ಶ್ರೇಯಾ(19) ಎಂಬುವರ ಮೃತದೇಹ ಪತ್ತೆ ಆಗಿದೆ. ಮೃತರ ಸಾವಿನ ಬಗ್ಗೆ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಖಚಿತ ಪಡಿಸಿದ್ದಾರೆ, ಮಹಾದೇವಿ ಅವರ ಮೂವರು ಪುತ್ರರು ಕಳೆದ ನಾಲ್ಕು ದಶಕಗಳಿಂದ ಮೆಪ್ಪಾಡಿಯಲ್ಲಿ ನೆಲೆಸಿದ್ದರು. ಅಕ್ಕಪಕ್ಕದಲ್ಲಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಂಡಿದ್ದರು ಗುಡ್ಡ ಕುಸಿತದಲ್ಲಿ ಎಲ್ಲರೂ ಸಾವನ್ನಪ್ಪಿದ್ದಾರೆ.

Join Whatsapp
Exit mobile version