ಕೊಟ್ಟಾಯಂ: ಹಾವು ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರ ಆರೋಗ್ಯ ಸ್ಥಿತಿಯಲ್ಲಿ ಗುರುವಾರ ಸ್ವಲ್ಪ ಸುಧಾರಣೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವೆಂಟಿಲೇಟರ್ ಮೂಲಕವೇ ಉಸಿರಾಟ ಮಾಡಿಸಲಾಗುತ್ತಿದ್ದು, ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ಅವರು ಸ್ವಯಂ ಉಸಿರಾಟ ಆರಂಭಿಸಿದ್ದರು, ಅವರ ಹೃದಯ ಮತ್ತು ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಆಸ್ಪತ್ರೆಯ ಸುಪರಿಟೆಂಡೆಂಟ್ ಡಾ.ಟಿ.ಕೆ.ಜಯಕುಮಾರ್ ತಿಳಿಸಿದ್ದಾರೆ.
ವಿಷವೇರಿದ ಪರಿಣಾಮವಾಗಿ ಬುಧವಾರ ಅವರು ಸ್ಪಂದಿಸುವುದನ್ನು ನಿಲ್ಲಿಸಿದ್ದು, ಉಸಿರಾಟದಲ್ಲೂ ಏರು ಪೇರಾಗಿತ್ತು. ರಕ್ತದ ಒತ್ತಡವೂ ಕುಸಿದಿತ್ತು. ಆದರೆ 11 ಗಂಟೆಯ ವೇಳೆಗೆ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.