Home ಟಾಪ್ ಸುದ್ದಿಗಳು ಮಂಗಳೂರು | ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 4.3 ಮೀಟರ್‌ಗೆ ಏರಿಕೆ

ಮಂಗಳೂರು | ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ: ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 4.3 ಮೀಟರ್‌ಗೆ ಏರಿಕೆ

ಮಂಗಳೂರು: ಪಶ್ಚಿಮಘಟ್ಟದಲ್ಲಿ ಇತ್ತೀಚೆಗೆ ಸುರಿದ ಉತ್ತಮ ಮಳೆಯಿಂದಾಗಿ ನೇತ್ರಾವತಿ ನದಿಯ ಒಳಹರಿವು ಹೆಚ್ಚಾಗಿದೆ.

ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 4.3 ಮೀಟರ್‌ಗೆ ಏರಿಕೆಯಾಗಿದೆ. ನಗರದಲ್ಲಿ ತಲೆದೋರಿದ್ದ ನೀರಿನ ಅಭಾವ ಸದ್ಯಕ್ಕೆ ಬಗೆಹರಿದಿದೆ.

ಶಂಭೂರಿನ ಎಎಂಆರ್ ಅಣೆಕಟ್ಟಿನ ನೀರಿನ ಮಟ್ಟವು ಹೆಚ್ಚಾಗತೊಡಗಿದ್ದು, ಅದರಂತೆ ಎಎಂಆರ್ ಡ್ಯಾಂನಿಂದ ತುಂಬೆ ವೆಂಟೆಡ್ ಡ್ಯಾಂಗೆ ನೀರು ಹರಿಸಲಾಗಿದೆ. ಗುರುವಾರ ತುಂಬೆ ವೆಂಟೆಡ್ ಅಣೆಕಟ್ಟಿನ ಮಟ್ಟ 4.3 ಮೀಟರ್ ಆಗಿದೆ.

Join Whatsapp
Exit mobile version