ಹಿಂದೂ ಧರ್ಮಕ್ಕೆ ಮತಾಂತರಗೊಂಡ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಂ ರಿಝ್ವಿ

Prasthutha|

ಉತ್ತರ ಪ್ರದೇಶ: ಇಸ್ಲಾಂ ಧರ್ಮದ ವಿರುದ್ಧ ಹೇಳಿಕೆಗಳಿಗಾಗಿ ಕುಖ್ಯಾತಿ ಪಡೆದಿರುವ ವಿವಾದಿತ ನಾಯಕ, ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಂ ರಿಝ್ವಿ ಇಂದು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿರುವ ದಸ್ನಾ ದೇವಿ ದೇವಾಲಯದ ಮಹಾಂತ್ ಯತಿ ನರಸಿಂಹಾನಂದ್ ಗಿರಿ ಮಹಾರಾಜ್ ಅವರ ಸಮ್ಮುಖದಲ್ಲಿ ಹಿಂದೂ ಧರ್ಮ ಸೇರಿದ್ದಾರೆ.

- Advertisement -


ವಾಸ್ತವವಾಗಿ, ಈ ಹಿಂದೆಯೇ ವಾಸಿಮ್ ರಿಝ್ವಿ ಅವರು ತಾನು ಹಿಂದೂ ಧರ್ಮಕ್ಕೆ ಮತಾಂತರವಾಗುವುದಾಗಿ ತಿಳಿಸಿದ್ದರು. ತನ್ನ ಅಂತಿಮ ವಿಧಿಗಳನ್ನು ಹಿಂದೂ ಧರ್ಮದ ಆಚರಣೆಗಳ ಪ್ರಕಾರ ಮಾಡಬೇಕೆಂದು ಘೋಷಿಸಿದ್ದರು.

ವಾಸಿಮ್ ರಿಝ್ವಿ ಅವರು ಇಸ್ಲಾಂ ಧರ್ಮದ ವಿರುದ್ಧ ಹೇಳಿಕೆಗಳಿಗಾಗಿ ಅನೇಕ ವರ್ಷಗಳಿಂದ ಕುಖ್ಯಾತಿ ಪಡೆದಿದ್ದರು. ಇತ್ತೀಚೆಗೆ, ಅವರು ಕುರ್ ಆನ್ ನ ಆಯತ್ ಗಳನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದರು ಮತ್ತು ನ್ಯಾಯಾಲಯವು ಅದನ್ನು ತಿರಸ್ಕರಿಸಿತ್ತು. ತನ್ನ ಹೆಸರನ್ನು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂದು ಬದಲಾಯಿಸಿಕೊಂಡಿದ್ದಾರೆ.

- Advertisement -

Join Whatsapp