Home ಟಾಪ್ ಸುದ್ದಿಗಳು ಅಮೆರಿಕ ಸಂಸತ್ ನುಗ್ಗಿದ ಟ್ರಂಪ್ ಬೆಂಬಲಿಗರು | ಘರ್ಷಣೆಗೆ ಮಹಿಳೆ ಬಲಿ; ಟ್ರಂಪ್ ಸೋಶಿಯಲ್ ಮೀಡಿಯಾ...

ಅಮೆರಿಕ ಸಂಸತ್ ನುಗ್ಗಿದ ಟ್ರಂಪ್ ಬೆಂಬಲಿಗರು | ಘರ್ಷಣೆಗೆ ಮಹಿಳೆ ಬಲಿ; ಟ್ರಂಪ್ ಸೋಶಿಯಲ್ ಮೀಡಿಯಾ ಖಾತೆಗಳಿಗೆ ತಡೆ

ವಾಷಿಂಗ್ಟನ್ ಡಿಸಿ : ಅಮೆರಿಕ ಸಂಸತ್ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಸಂಸತ್ ಭವನ ನುಗ್ಗಿದ್ದು, ಭಾರೀ ಸಂಘರ್ಷಕ್ಕೆ ಕಾರಣವಾಗಿದೆ. ಈ ವೇಳೆ ನಡೆದ ಗೋಲಿಬಾರ್ ನಲ್ಲಿ ಓರ್ವ ಮಹಿಳೆ ಮೃತಮಟ್ಟಿದ್ದು, ಕರ್ಫ್ಯೂ ವಿಧಿಸಲಾಗಿದೆ.

ಸಂಸತ್ ನಲ್ಲಿ ಎಲೆಕ್ಟ್ರೊರಲ್ ಮತಗಳನ್ನು ಎಣಿಸುವ ಮತ್ತು ಪ್ರಮಾಣಿಕರಿಸುವ ಪ್ರಕ್ರಿಯೆ ಸಾಗುತ್ತಿರುವ ನಡುವೆ, ಭದ್ರತೆಯನ್ನು ಉಲ್ಲಂಘಿಸಿ ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿದ ನೂರಾರು ಮಂದಿ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದಾರೆ. ಈ ವೇಳೆ ಅವರನ್ನು ತಡೆಯಲು ಪೊಲೀಸರು ಯತ್ನಿಸಿದ್ದಾರೆ.

ಚುನಾವಣೆಯಲ್ಲಿ ಸೋಲು ಕಂಡಿರುವ ಟ್ರಂಪ್ ತಮ್ಮ ಸೋಲಿಗೆ ಚುನಾವಣಾ ಅಕ್ರಮಗಳು ಕಾರಣ ಎಂದು ಆರೋಪಿಸಿದ್ದರು.

ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪ್ರಚೋದನಾತ್ಮಕ ಸಂದೇಶಗಳನ್ನು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಾದ ಟ್ವಿಟರ್, ಫೇಸ್ ಬುಕ್, ಇನ್ಸ್ಟಾಗ್ರಾಂ ಸಂಸ್ಥೆಗಳು ಅವರ ಖಾತೆಗಳನ್ನು ತಾತ್ಕಾಲಿಕ ತಡೆ ಹಿಡಿದಿವೆ.

ಪರಿಸ್ಥಿತಿ ನಿಯಂತ್ರಣ ತರಲು ನಗರದಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಭದ್ರತಾ ಮುನ್ನೆಚ್ಚರಿಕೆ ವಹಿಸಲಾಗಿದೆ. ಘಟನೆಯನ್ನು ಖಂಡಿಸಿರುವ ನಿಯೋಜಿತ ಅಧ್ಯಕ್ಷ ಜೋ ಬೈಡನ್, ಇದು ಅಮೆರಿಕದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಕ್ಷಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಘಟನೆ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಪ್ರತಿಕ್ರಿಯಿಸಿದ್ದು, ವಾಷಿಂಗ್ಟನ್ ಸಂಘರ್ಷದಿಂದ ದುಃಖವಾಗಿದೆ, ಶಾಂತಿಯುತ ಅಧಿಕಾರ ಹಸ್ತಾಂತರ ನಡೆಯಲಿ ಎಂದಿದ್ದಾರೆ.

Join Whatsapp
Exit mobile version