ಪಕ್ಷದ ಕಾರ್ಯಕರ್ತರಿಂದಲೇ ಹತ್ಯೆಯಾದರೇ ಶಾಜಹಾನ್ ?

Prasthutha|

►ಸಿಪಿಐ (ಎಂ) ಕಾರ್ಯಕರ್ತನ ಹತ್ಯೆಗೆ ಟ್ವಿಸ್ಟ್

- Advertisement -

ಪಾಲಕ್ಕಾಡ್: ನಿನ್ನೆ ರಾತ್ರಿ ಹತ್ಯೆಯಾದ ಸಿಪಿಐ (ಎಂ) ಮರುತ ರೋಡ್ ಮುಖಂಡ  ಶಾಜಹಾನ್ ತನ್ನದೇ ಪಕ್ಷದ ಕಾರ್ಯಕರ್ತರಿಂದಲೇ ಹತ್ಯೆಯಾಗಿದ್ದಾರೆ ಎಂದು ಘಟನೆ ವೇಳೆ  ಜೊತೆಯಲ್ಲಿದ್ದ ಮಿತ್ರ ಸುರೇಶ್ ಹೇಳಿದ್ದಾರೆ.

ರಾತ್ರಿ ಕುನ್ನಂಗಾಡ್ ಜಂಕ್ಷನ್ ಬಳಿ ಶಾಜಹಾನ್ ಜೊತೆ ನಿಂತಿದ್ದ ವೇಳೆ ಮಾರಕಾಯುಧಗಳೊಂದಿಗೆ ಸುಮಾರು ಎಂಟು ಮಂದಿ ಆಗಮಿಸಿದ್ದು, ಈ ಪೈಕಿ ಶಬರಿ ಮತ್ತು ಅನೀಷ್ ಸೇರಿ ಶಾಜಹಾನ್ ಮೇಲೆ ದಾಳಿ ನಡೆಸಿದ್ದಾರೆ. ಮೊದಲು ವಿಚಲಿತನಾದ ನಾನು ಒಂದಷ್ಟು ದೂರ ಓಡಿದ್ದು, ಬಳಿಕ ನಾನೇ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದೇನೆ ಎಂದು ಘಟನೆ ವೇಳೆ ಜೊತೆಗಿದ್ದ ಸುರೇಶ್ ಹೇಳಿದ್ದಾರೆ.

- Advertisement -

ಶಬರಿ ಮತ್ತು ಅನೀಷ್ ಪಕ್ಷದ ಕಾರ್ಯಕರ್ತರಾಗಿದ್ದು, ದೇಶಾಭಿಮಾನಿ ದೈನಿಕ (ಸಿಪಿಐಎಂ ಮುಖವಾಣಿ) ವಿಚಾರವಾಗಿ ಶಾಜಹಾನ್ ನಡುವೆ ವಾಗ್ವಾದ ನಡೆದಿತ್ತು ಎಂದು ಸುರೇಶ್ ಮಾಹಿತಿ ನೀಡಿದ್ದಾರೆ.

ಆದರೆ ಇದನ್ನು ದೃಢಪಡಿಸುವ ಮಾಹಿತಿಗಳು ಪೊಲೀಸರಿಗೆ ಈವರೆಗೆ ದೊರೆತಿಲ್ಲ ಎಂದು ತಿಳಿದುಬಂದಿದೆ.

Join Whatsapp
Exit mobile version