Home ಟಾಪ್ ಸುದ್ದಿಗಳು ವಕ್ಫ್ ವಿವಾದ: ಯುಟಿ ಖಾದರ್ ಭೇಟಿ ಮಾಡಿದ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್

ವಕ್ಫ್ ವಿವಾದ: ಯುಟಿ ಖಾದರ್ ಭೇಟಿ ಮಾಡಿದ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್

ಮಂಗಳೂರು: ವಕ್ಫ್ ಆಸ್ತಿ ಸಂರಕ್ಷಣೆ ಮತ್ತು ವಕ್ಫ್ ಸ್ಥಿರಾಸ್ತಿ ಅಕ್ರಮ ಒತ್ತುವರಿಯ ಬಗ್ಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಣೆಯಾಗಿದ್ದ ಅನ್ವರ್ ಮಾಣಿಪ್ಪಾಡಿಯವರ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ತಂಡ ರಫೀಉದ್ದೀನ್ ಕುದ್ರೋಳಿ ಯವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯುಟಿ ಖಾದರ್ ರವರನ್ನು ಭೇಟಿ ಮಾಡಿದ್ದು, ಈ ಸಂದರ್ಭ ವಕ್ಫ್ ಆಸ್ತಿಗೆ ಸಂಬಂಧಿಸಿದ ವರದಿಯ ಜ್ಞಾಪಕ ಪತ್ರವನ್ನು ನೀಡಲಾಯಿತು.

ದೇಶದಲ್ಲಿ ವಕ್ಫ್ ಆಸ್ತಿಯ ಬಗ್ಗೆ ನಡೆಯುತ್ತಿರುವ ವಿದ್ಯಮಾನ ಮತ್ತು ರಾಜ್ಯದಲ್ಲಿ ವಕ್ಫ್‌ಗೆ ಸಂಬಂಧಿಸಿದ ಅಸ್ತಿಯಿಂದಾಗಿ ಸಮುದಾಯಕ್ಕೆ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಉದ್ಯೋಗ ಸೃಷ್ಟಿಯಂತಹ ಅವಕಾಶಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಕಾರ್ಯಗಳ ಕುರಿತು ವಿಚಾರ ವಿನಿಮಯ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಮ್ ವಾಯ್ಸ್ ಫಾರ್ ಜಸ್ಟಿಸ್ ತಂಡದ ಸದಸ್ಯರಾದ ವಹಾಬ್ ಕುದ್ರೋಳಿ, ರಿಝ್ವಾನ್ ಸಜಿಪ, ಸಲಾಂ ಉಚ್ಚಿಲ್, ರಫೀಕ್ ಪರ್ಲಿಯ, ಹುಸೈನ್ ಮದನಿನಗರ, ಫಾರೂಕ್ ಸೋಶಿಯಲ್ ಹಾಗೂ ಮುಸ್ತಫಾ ಉಳ್ಳಾಲ್ ಉಪಸ್ಥಿತರಿದ್ದರು.

Join Whatsapp
Exit mobile version