Home ಟಾಪ್ ಸುದ್ದಿಗಳು ಗೂಢಚಾರಿಕೆ ಆಪಾದನೆ: ರಷ್ಯಾದಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರನ ಬಂಧನ

ಗೂಢಚಾರಿಕೆ ಆಪಾದನೆ: ರಷ್ಯಾದಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರನ ಬಂಧನ

ಮಾಸ್ಕೋ: ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ ಜೆರ್ಶ್ ಕೋವಿಕ್ ಎಂಬವರು ಯೆಕಟರಿನ್ ಬರ್ಗ್ ನಲ್ಲಿ ಯುಎಸ್’ಎ ಪರ ಗೂಢಚಾರಿಕೆ ನಡೆಸಿರುವುದು ಕಂಡು ಬಂದಿದೆ ಎಂದು ರಷ್ಯಾದ ಎಫ್’ಎಸ್’ಎಸ್- ರಾಷ್ಟ್ರೀಯ ಭದ್ರತಾ ಸೇವಾ ಸಂಸ್ಥೆಯು ಆರೋಪಿಸಿದೆ.


ಅಮೆರಿಕದ ಪತ್ರಿಕೆಯ ವರದಿಗಾರ ರಷ್ಯಾ ಸರಕಾರದ, ಸೇನೆಯ ರಹಸ್ಯಗಳನ್ನು ಗೂಢವಾಗಿ ಸಂಗ್ರಹಿಸಿದ್ದಾನೆ. ಅದನ್ನು ಅಮೆರಿಕಕ್ಕೆ ವಾಲ್ ಸ್ಟ್ರೀಟ್ ಜರ್ನಲ್’ಗೆ ರವಾನಿಸಿದ್ದಾನೆ. ಯೆಕಟರಿನ್ ಬರ್ಗ್ ರಷ್ಯಾದ ಮಿಲಿಟರಿ ಕೈಗಾರಿಕಾ ಸಮುಚ್ಚಯವಾಗಿದ್ದು, ಇಲ್ಲಿಯೇ ಜೆರ್ಶ್ ಕೋವಿಕ್ ಎಡತಾಕುತ್ತಿದ್ದ ಎಂದೂ ಎಫ್ ಎಸ್ ಎಸ್ (ಬಿ) ಹೇಳಿದೆ.

Join Whatsapp
Exit mobile version