ಹೆಲಿಕಾಪ್ಟರ್‌’ಗೆ ರಣಹದ್ದು ಡಿಕ್ಕಿ: ಸುರಕ್ಷಿತವಾಗಿ ಬೆಂಗಳೂರು ತಲುಪಿದ ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಅವರು ಚುನಾವಣಾ ಪ್ರಚಾರದ ಸಂಬಂಧ ಮಂಗಳವಾರ (ಮೇ 02) ಮುಳಬಾಗಿಲಿಗೆ ಹೆಲಿಕಾಪ್ಟರ್‌ ಮೂಲಕ ಸಂಚಾರ ಮಾಡುತ್ತಿದ್ದಾಗ ಹೊಸಕೋಟೆ ಬಳಿ ರಣ ಹದ್ದು ಹೆಲಿಕಾಪ್ಟರ್‌ ಗೆ ಡಿಕ್ಕಿ ಹೊಡೆದಿದೆ.

- Advertisement -

ಈ ವೇಳೆ ಹೆಲಿಕಾಪ್ಟರ್‌ ಗಾಜು ಪುಡಿಯಾಗಿದ್ದು, ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಅದೃಷ್ಟ ವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ಹೆಲಿಕಾಪ್ಟರ್‌ ಅನ್ನು ಬೆಂಗಳೂರಿನ ಹೆಚ್‌ ಎಎಲ್‌ ವಿಮಾನ ನಿಲ್ದಾಣಕ್ಕೆ ತಂದು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಗಿದೆ.