Home ಟಾಪ್ ಸುದ್ದಿಗಳು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅ.17 ರಂದು ಮತದಾನ: ವೇಳಾಪಟ್ಟಿ ಬಿಡುಗಡೆ

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅ.17 ರಂದು ಮತದಾನ: ವೇಳಾಪಟ್ಟಿ ಬಿಡುಗಡೆ

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆಗೆ ಚುನಾವಣೆಯ ವೇಳಾಪಟ್ಟಿ ಇಂದು ಬಿಡುಗಡೆಯಾಗಿದ್ದು, ಅ.17 ರಂದು ಮತದಾನ ನಡೆಯಲಿದೆ.


ಚುನಾವಣೆ ಅಧಿಸೂಚನೆ ಇಂದಿನಿಂದಲೇ (ಸೆ.22) ಜಾರಿಯಾಗಿದ್ದು, ಸೆ. 24 ರಿಂದ 30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅ.1ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಲಿದೆ. ಕ್ರಮ ಬದ್ಧವಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಂದು ಘೋಷಿಸಲಾಗುತ್ತದೆ. ನಾಮಪತ್ರ ಹಿಂಪಡೆಯಲು ಅ. 8 ಕೊನೆ ದಿನವಾಗಿದ್ದು, ಕಣದಲ್ಲಿ ಉಳಿಯಲಿರುವ ಅಭ್ಯರ್ಥಿಗಳ ಪಟ್ಟಿ ಅದೇ ದಿನ ಬಿಡುಗಡೆ ಮಾಡಲಾಗುತ್ತದೆ.
ಅ.17 ರಂದು ಮತದಾನ ನಡಯಲಿದ್ದು, ಅ. 19ರಂದು ಎಐಸಿಸಿ ಕೇಂದ್ರ ಕಚೇರಿಯಲ್ಲಿ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

Join Whatsapp
Exit mobile version