➤ ಸ್ವತಂತ್ರ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವ್ಯಾಪಕ ಬೆಂಬಲದೊಂದಿಗೆ ಮತ್ತೊಮ್ಮೆ ಅಧ್ಯಕ್ಷರಾಗುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಅವರು ಯಾವುದೇ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಎರಡು ದಶಕಗಳಿಗೂ ಹೆಚ್ಚು ಕಾಲ ಅಧ್ಯಕ್ಷ ಅಥವಾ ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿರುವ ಪುಟಿನ್, ಮುಂದಿನ ವರ್ಷ ಮಾರ್ಚ್‌ನಲ್ಲಿ ಆರಾಮವಾಗಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಅವರು ಆಡಳಿತಾರೂಢ ಯುನೈಟೆಡ್ ರಷ್ಯಾ (UR) ಪಕ್ಷದ ಸಂಪೂರ್ಣ ಬೆಂಬಲವನ್ನು ಹೊಂದಿದ್ದರೂ ಅದರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು UR ಪಕ್ಷದ ಹಿರಿಯ ಅಧಿಕಾರಿ ಆಂಡ್ರೇ ತುರ್ಚಕ್ ಅವರು ಹೇಳಿದ್ದಾರೆಂದು ವರದಿಯಾಗಿದೆ.
ಪುಟಿನ್ ಅವರನ್ನು ಬೆಂಬಲಿಸುವ ಜಸ್ಟ್ ರಷ್ಯಾ ಪಕ್ಷದ ಹಿರಿಯ ರಾಜಕಾರಣಿ ಸೆರ್ಗೆಯ್ ಮಿರೊನೊವ್, ಪುಟಿನ್ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಮತ್ತು ಅವರ ಬೆಂಬಲಕ್ಕೆ ಸಹಿಗಳನ್ನು ಸಂಗ್ರಹಿಸಲಾಗುವುದು ಎಂದಿದ್ದಾರೆ
71 ವರ್ಷದ ಪುಟಿನ್‌ಗೆ ಚುನಾವಣೆ ಔಪಚಾರಿಕವಾಗಿದೆ: ರಾಜ್ಯದ ಬೆಂಬಲದೊಂದಿಗೆ, ಸರ್ಕಾರಿ ಮಾಧ್ಯಮಗಳು ಮತ್ತು ಯಾವುದೇ ಮುಖ್ಯವಾಹಿನಿಯ ಸಾರ್ವಜನಿಕ ಭಿನ್ನಾಭಿಪ್ರಾಯವಿಲ್ಲದೆ ಅವರು ಗೆಲ್ಲುವುದು ಖಚಿತ ಎನ್ನಲಾಗಿದೆ.