Home ಟಾಪ್ ಸುದ್ದಿಗಳು ವಿಟ್ಲ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ವಿಟ್ಲ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ವಿಟ್ಲ: ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪೆರಾಜೆ ಎಂಬಲ್ಲಿ ನಡೆದಿದೆ.

ಪೆರಾಜೆ ನಿವಾಸಿ ಪ್ರಶಾಂತ್ ನಾಯ್ಕ (29) ಆತ್ಮಹತ್ಯೆ ಮಾಡಿಕೊಂಡ ಯುವಕ.

ರಾತ್ರಿ ಸುಮಾರು 2 ಗಂಟೆಯ ಬಳಿಕ ಪ್ರಶಾಂತ್ ಬಾವಿಗೆ ಹಾರಿರಬೇಕು ಎಂದು ಹೇಳಲಾಗುತ್ತಿದೆ.

ಪ್ರಶಾಂತ್ ಅವರ ದೊಡ್ಡಮ್ಮ ವಾರಗಳ ಹಿಂದೆ ತೀರಿಕೊಂಡಿದ್ದು, ಅವರ ಉತ್ತರಕ್ರಿಯೆ ಕಾರ್ಯಕ್ರಮ ಬುಧವಾರ ಇವರ ಮನೆಯಲ್ಲಿ ನಡೆದಿತ್ತು. ಆ ಬಳಿಕ ರಾತ್ರಿ ಕೂಡ ಅದೇ ಕಾರ್ಯಕ್ರಮದ ಊಟ ಮಾಡಿ ಸ್ನೇಹಿತರ ಹಾಗೂ ಸಂಬಂಧಿಕರು ಹೋದ ಬಳಿಕ ಇವರು ಮನೆಯಿಂದ ಹೊರಗೆ ಬಂದು ಮನೆಯ ಸಮೀಪದ ಬಾವಿಗೆ ಹಾರಿರಬೇಕು ಎಂದು ಶಂಕಿಸಲಾಗಿದೆ.

ನೇರಳಕಟ್ಟೆ ಅಗ್ರಿ ಎಂಬ ಸಂಸ್ಥೆಯೊಂದರಲ್ಲಿ ಕೆಲಸ ಪ್ರಶಾಂತ್ ಮಾಡುತ್ತಿದ್ದರು.

ಇವರು ಕಳೆದ ಒಂದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರಶಾಂತ್ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು. ಇವರು ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದರು.

Join Whatsapp
Exit mobile version