ಬೆಂಗಳೂರು; ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆಯನ್ನು ಉಳಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಮುಚ್ಚಬಾರದು, ವಿ.ಐ.ಎಸ್.ಎಲ್ ಕಾರ್ಖಾನೆಯ ಹಿನ್ನಡೆ, ಹಿನ್ನೆಲೆ ವಿವರಗಳ ಅಗತ್ಯವಿಲ್ಲ. ಈ ಕಾರ್ಖಾನೆಯನ್ನು ಉಳಿಸಬೇಕು, ಸ್ಥಗಿತಗೊಳಿಸಬಾರದು, ಈ ಕಾರ್ಖಾನೆಯನ್ನು ಮುಂದುವರೆಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯ ಮಾಡುವ ಅಗತ್ಯವಿದೆ ಎಂದು ಶಾಸಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್’ನ ಬಿ.ಕೆ.ಸಂಗಮೇಶ್ ಅವರು ಭದ್ರಾವತಿಯ ವಿಎಸ್’ಐಎಲ್ ಕಾರ್ಖಾನೆಯನ್ನು ಮುಚ್ಚಲಾಗುತ್ತಿದೆ. ಈ ಕಾರ್ಖಾನೆ ಮೊದಲು ರಾಜ್ಯ ಸರ್ಕಾರದ ಅಧೀನದಲ್ಲಿದ್ದು, 1989ರಲ್ಲಿ ಸದರಿ ಕಾರ್ಖಾನೆಯನ್ನು ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಕೈತಪ್ಪಲಿದ್ದು ಯಾವುದೇ ಕಾರಣಕ್ಕೂ ವಿ.ಎಸ್.ಐಎಲ್ ಕಾರ್ಖಾನೆಯನ್ನು ಮುಚ್ಚದಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು ಎಂದು ಸದನದಲ್ಲಿ ಪ್ರಸ್ತಾಪಿಸಿದಕ್ಕೆ ಮಾಜಿ ಮುಖ್ಯಮಂತ್ರಿಗಳು ಆಗಿರುವ ಶಾಸಕ ಬಿ ಎಸ್ ವೈ ಅವರು ವಿಎಸ್’ಐಎಲ್ ಕಾರ್ಖಾನೆಯ ಅಗತ್ಯತೆ ಬಗ್ಗೆ ಸದನಕ್ಕೆ ಮನವರಿಕೆ ಮಾಡಿಕೊಟ್ಟರು.
ವಿ.ಎಸ್.ಐ.ಎಲ್ ಕಾರ್ಖಾನೆಯನ್ನು ಉಳಿಸುವ ಸಂಬಂಧ ಕೇಂದ್ರದ ಜೊತೆ ಮಾತನಾಡಿ, ಈ ಕಾರ್ಖಾನೆಗೆ 4 ಎಕರೆ ಜಾಗವನ್ನು ತಮ್ಮ ಕ್ಷೇತ್ರದ ಚಿಕ್ಕನಾಯಕನಹಳ್ಳಿಯಲ್ಲಿ ಕಬ್ಬಿಣದ ಅದಿರು ತೆಗೆಯಲು ಭೂಮಿಯನ್ನು ಗುತ್ತಿಗೆಗೆ ನೀಡಲಾಗಿದೆ. ಕಾರ್ಖಾನೆಯನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ತಿಳಿಸಿದರು.
ಕಡಲೆ ಬೆಲೆ ಕುಸಿದಿದ್ದು, ಕಡಲೆ ಬೆಳೆದ ರೈತ ಹತಾಶೆಗೊಂಡಿರುವುದು ಗಮನಕ್ಕಿದ್ದು ಕೃಷಿ ಸಚಿವರ ಜೊತೆ ಚರ್ಚಿಸಿ ಕೂಡಲೇ “ಖರೀದಿ ಕೇಂದ್ರ” ಸ್ಥಾಪನೆ ಮಾಡಲು ಕ್ರಮ ವಹಿಸಲಾಗುವುದು. ಈ ಮೂಲಕ ಸರಕಾರ ರೈತರ ನೆರವಿಗೆ ಧಾವಿಸಲಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು ಭದ್ರಾವತಿ ಶಾಸಕರ ಬಿ.ಕೆ.ಸಂಗಮೇಶ ಅವರು ಪ್ರಶ್ನೆಗೆ ಉತ್ತರಿಸಿದರು.