Home ರಾಜ್ಯ ರೌಡಿ ಶೀಟರ್ ಜೊತೆ ಸಭೆ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ: ಫೋಟೋ ವೈರಲ್

ರೌಡಿ ಶೀಟರ್ ಜೊತೆ ಸಭೆ ನಡೆಸಿದ ವಿಶ್ವೇಶ್ವರ ಹೆಗಡೆ ಕಾಗೇರಿ: ಫೋಟೋ ವೈರಲ್

ಶಿರಸಿ:  ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ರೌಡಿಶೀಟರ್ ಫಯಾಝ್ ಚೌಟಿ ತನ್ನ ಬೆಂಬಲಿಗರೊಂದಿಗೆ ಸಭೆ ನಡೆಸುತ್ತಿರುವ ಫೋಟೋ ವೈರಲ್ ಆಗಿದ್ದು, ಇದು ಹಲವು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ದರೋಡೆ, ಬ್ಲಾಕ್ ಮೇಲ್, ಹಣ ವಂಚನೆ, ಅಪಹರಣ ಸೇರಿದಂತೆ 17ಕ್ಕೂ ಹೆಚ್ಚು ಪ್ರಕರಣದಲ್ಲಿ ಫಯಾಝ್ ಆರೋಪಿಯಾಗಿದ್ದು,   ಭೂಗತ ಪಾತಕಿ ಹೆಬ್ಬೆಟ್ಟು ಮಂಜ ಸೇರಿದಂತೆ ಅನೇಕರೊಂದಿಗೆ ಸಂಪರ್ಕದಲ್ಲಿದ್ದಾನೆ. ಆದರೆ 5  ದಿನಗಳ ಹಿಂದೆ ಗುಪ್ತವಾಗಿ 50ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಾಗೇರಿ ಕಚೇರಿಯಲ್ಲಿ ಚುನಾವಣೆ ಸಂಬಂಧ ಚೌಟಿ ಸಭೆ ನಡೆಸಿರುವ ಫೋಟೊ ಇದೀಗ ಎಲ್ಲೆಡೆ ವೈರಲ್ ಆಗಿದೆ.

Join Whatsapp
Exit mobile version