ನ್ಯೂಯಾರ್ಕ್: ಕೋವಿಡ್-19 ಕಾರಣದಿಂದಾಗಿ ಕೆಲಸ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಜಗತ್ತಿನಾದ್ಯಂತ ಇನ್ನೂ ಮುಂದುವರಿದಿದೆ. ಇದೀಗ ಕಂಪನಿಯ CEO ಒಬ್ಬರು ಝೂಮ್ ಮೂಲಕ ಸಭೆ ನಡೆಸುತ್ತಿರುವಾಗಲೇ ಬರೋಬ್ಬರಿ 900 ಮಂದಿ ಸಿಬ್ಬಂದಿಯನ್ನು ಏಕಕಾಲದಲ್ಲಿ ಕೆಲಸದಿಂದ ವಜಾ ಗೊಳಿಸಿದ್ದಾರೆ. ಈ ZOOM MEETING ವೀಡಿಯೋ ಇದೀಗ ವೈರಲ್ ಆಗಿದೆ
ಅಮೆರಿಕದಲ್ಲಿ ಡಿಜಿಟಲ್ ಸೇವೆ ನೀಡುವ ಕಂಪನಿಯಾದ ಬೆಟರ್.ಕಾಮ್’ನ CEO ಭಾರತೀಯ ಮೂಲದ ವಿಶಾಲ್ ಗರ್ಗ್, ಝೂಮ್ ಸಭೆ ಆಯೋಜಿಸಿ ಅದರಲ್ಲಿ ತಮ್ಮ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವಿವಿಧ ದೇಶಗಳ 900 ಸಿಬ್ಬಂದಿಯನ್ನು ಏಕಕಾಲಕ್ಕೆ ವಜಾಮಾಡುವ ಘೋಷಣೆ ಮಾಡಿದ್ದಾರೆ. ಸಭೆಯಲ್ಲಿ ಮಾತನಾಡಿದ ವಿಶಾಲ್ ಗರ್ಗ್, ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಹಾಗೂ ಉತ್ಪಾದಕತೆಯಲ್ಲಿನ ಹಿನ್ನಡೆಯಿಂದಾಗಿ ಈ ಝೂಮ್ ಸಭೆಯಲ್ಲಿ ಭಾಗವಹಿಸಿರುವ ಎಲ್ಲಾ ನೌಕರರೂ ಕೆಲಸ ಕಳೆದುಕೊಳ್ಳುತ್ತಿರುವ ನತದೃಷ್ಟ ಗುಂಪಿಗೆ ಸೇರಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ಕಾರಣದಿಂದಾಗಿ ನಮ್ಮ ಸಂಸ್ಥೆಯ ಬೆಳವಣಿಗೆಯು ಕುಂಠಿತಗೊಂಡಿದೆ. ಹೀಗಾಗಿ ನಿಮ್ಮನ್ನು ಲೇ ಆಫ್ ಮಾಡಲಾಗುತ್ತಿದೆ. ಈ ಕುರಿತು HR ವಿಭಾಗದಿಂದ ನಿಮ್ಮೆಲ್ಲರಿಗೂ ಈ-ಮೇಲ್ ಸಂದೇಶ ಕಳುಹಿಸಲಾಗುವುದು. ಅದರಲ್ಲಿ ಭತ್ಯೆಗಳ ಕುರಿತಾದ ಮಾಹಿತಿ ಇರಲಿದೆ ಎಂದು ವಿಶಾಲ್ ಗರ್ಗ್ ಹೇಳಿದ್ದಾರೆ.
ಬೆಟರ್.ಕಾಮ್’ನ CEO ವಿಶಾಲ್ ಗರ್ಗ್ ಮಾತುಗಳನ್ನು ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದು, ಈ ವೀಡಿಯೋ ಇದೀಗ ವೈರಲ್ ಆಗಿದೆ.