Home ಟಾಪ್ ಸುದ್ದಿಗಳು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರದ್ದು ಎನ್ನಲಾದ ಅಶ್ಲೀಲ ವೀಡಿಯೊ ವೈರಲ್!

ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರದ್ದು ಎನ್ನಲಾದ ಅಶ್ಲೀಲ ವೀಡಿಯೊ ವೈರಲ್!

ಬೆಂಗಳೂರು: ಮಾಜಿ‌‌ಮುಖ್ಯಮಂತ್ರಿ ಸದಾಗೌಡರದ್ದು ಎನ್ನಲಾದ ಅಶ್ಲೀಲ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮಹಿಳೆಯೊಬ್ಬರೊಂದಿಗೆ ‘ಆನ್ಲೈನ್’ ವ್ಯವಹಾರದಲ್ಲಿ ತೊಡಗಿಕೊಂಡಿರುವ ವೀಡಿಯೋ ದೃಶ್ಯ ಭಾರೀ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಅಸಹ್ಯಕರವಾಗಿ ಮಾತನಾಡುತ್ತಾ ‘ಉದ್ವೇಗದ ಆನಂದ’ದ ಕ್ಷಣಗಳ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದೆ.

ತಿಂಗಳುಗಳ ಹಿಂದೆ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಬಿಡುಗಡೆಯಾಗದಂತೆ ಸದಾನಂದವಗೌಡರವರು ನ್ಯಾಯಾಲಯದಿಂದ ತಡೆ ತಂದಿರುವುದು ಇಲ್ಲಿ ಉಲ್ಲೇಖಾರ್ಹ. ಇದೀಗ ಸದಾನಂದರ ಭಯದ ಹಿಂದಿನ ಅಸಲಿಯತ್ತು ಹೊರಬಂದಿದೆ ಎನ್ನಲಾಗಿದೆ. ಸದಾನಂದರ ಈ ‘ಆನಂದ’ ದ ದೃಶ್ಯಗಳು ಮಾಜಿಮುಖ್ಯಮಂತ್ರಿಗಳ ಬಗ್ಗೆ ಅಸಹ್ಯ ಮೂಡಿಸುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version