ಲಕ್ನೋ: ಅನುಚಿತ ವರ್ತನೆ ತೋರಿದ ಪೇದೆಯ ವಿರುದ್ಧ ರೊಚ್ಚಿಗೆದ್ದ ಮಹಿಳೆಯೊಬ್ಬರು ಸಾರ್ವಜನಿಕರೆದುರೇ ಚಪ್ಪಲಿಯೇಟು ನೀಡಿದ ಘಟನೆ ಲಕ್ನೋದ ಚಾರ್’ಭಾಗ್ ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸಾಕಷ್ಟು ವೈರಲ್ ಆಗಿದೆ.
ಕರ್ತವ್ಯದಲಿದ್ದ ವೇಳೆ ಮದ್ಯಪಾನ ಮಾಡಿದ್ದ ಪೊಲೀಸ್ ಪೇದೆಯ ದುರ್ವತನೆಯನ್ನು ರೈಲ್ವೇ ನಿಲ್ದಾಣದಲ್ಲಿದ್ದ ಸಾರ್ವಜನಿಕರೊಬ್ಬರು ಪ್ರಶ್ನಿಸಿದ್ದು, ಈ ವೇಳೆ ಪೇದೆ ಆತನ ಮೇಲೆ ಲಾಠಿಯಿಂದ ಥಳಿಸಲು ಯತ್ನಿಸಿದ್ದಾನೆ. ಇದೇ ವೇಳೆ ಮಹಿಳೆ ಪೇದೆಗೆ ಚಪ್ಪಲಿಯಿಂದ ಬಾರಿಸಿದ್ದಾಳೆ. ಆದರೆ ಆತ ಮಹಿಳೆಯನ್ನು ಜೋರಾಗಿ ತಳ್ಳಿದ್ದಾನೆ. ನೆಲಕ್ಕೆ ಬಿದ್ದರೂ ಹಠ ಬಿಡದ ಮಹಿಳೆ ಮತ್ತೆ ಎದ್ದು ಪೊಲೀಸ್ ಪೇದೆಗೆ ಚಪ್ಪಲಿಯಿಂದ ಬಾರಿಸಿದ್ದಾಳೆ.
ರೈಲ್ವೆ ನಿಲ್ದಾಣದಲ್ಲಿ ನಡೆದಿರುವ ಈ ಘಟನೆಯ ವೀಡಿಯೋವನ್ನು ನಿಗರ್ ಪರ್ವೀನ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.