Home ಟಾಪ್ ಸುದ್ದಿಗಳು ಶಿರಸಿ । ಮೂರು ವಿಷಪೂರಿತ ನಾಗರಹಾವುಗಳೊಂದಿಗೆ ಸಾಹಸಕ್ಕಿಳಿದ ವ್ಯಕ್ತಿಗೆ ಹಾವು ಕಡಿತ; ವೀಡಿಯೋ ವೈರಲ್

ಶಿರಸಿ । ಮೂರು ವಿಷಪೂರಿತ ನಾಗರಹಾವುಗಳೊಂದಿಗೆ ಸಾಹಸಕ್ಕಿಳಿದ ವ್ಯಕ್ತಿಗೆ ಹಾವು ಕಡಿತ; ವೀಡಿಯೋ ವೈರಲ್

ಶಿರಸಿ: ಮೂರು ಹಾವುಗಳೊಂದಿಗೆ ದುಸ್ಸಾಹಸಕ್ಕಿಳಿದ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರಿಗೆ ವಿಷಪೂರಿತ ಸರ್ಪವೊಂದು ದಾಳಿ ನಡೆಸಿದ ಪರಿಣಾಮ ದಾರುಣವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶಿರಸಿಯಿಂದ ವರದಿಯಾಗಿದೆ.

3 ಹಾವುಗಳೊಂದಿಗೆ ದುಸ್ಸಾಹಸ ಪ್ರದರ್ಶನ ನಡೆಸಿದ ವೇಳೆ ಮತ್ತೊಂದು ಹಾವಿನಿಂದ ಕಡಿತಕ್ಕೊಳಗಾಗಿ ಆಸ್ಪತ್ರೆಗೆ ಇದೀಗ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯನ್ನು ಶಿರಸಿಯ ಮಾಝ್ ಸಯೀದ್ ಎಂದು ಗುರುತಿಸಲಾಗಿದೆ.

ಸಂತ್ರಸ್ತ ಮಾಝ್ ಸಯೀದ್ ಹಾವುಗಳೊಂದಿಗೆ ಸಾಹಸ ಪ್ರದರ್ಶನ ನಡೆಸುತ್ತಿರುವ ಚಿತ್ರೀಕರಿಸಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈತನ ದುಸ್ಸಾಹಸಕ್ಕೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಸ್ವತಃ ಯ್ಯೂಟ್ಯೂಬ್ ಚಾನೆಲ್ ನಿರ್ವಾಹಕರಾಗಿರುವ ಮಾಝ್ ಸಯೀದ್ ಅವರು ಹಾವುಗಳೊಂದಿಗೆ ದುಸ್ಸಾಹಸಕ್ಕೆ ಇಳಿದ ದುರ್ಘಟನೆ ನಡೆದಿದ್ದು, ಸಯೀದ್ ನಾಗರ ಹಾವಿನ ಬಾಲ ಹಿಡಿದ ವೇಳೆ ಆತನಿಗೆ ಕಚ್ಚಿರುವುದು ವೈರಲ್ ವೀಡಿಯೋದಲ್ಲಿ ಸೆರೆಯಾಗಿದೆ.

ಈ ವೀಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಭಾರತೀಯ ಅರಣ್ಯ ಸೇವಾಧಿಕಾರಿ ಸುಸಂತ ನಂದಾ ಅವರು ಈ ದುಸ್ಸಾಹಸಕ್ಕೆ ಇಳಿದ ಯುವಕನ ನಡೆಯನ್ನು ಟೀಕಿಸಿರುವ ಅವರು ಇದೊಂದು ಭಯಾನಕ ಘಟಣೆ ಎಂದು ಬಣ್ಣಿಸಿದ್ದಾರೆ. ಈ ರೀತಿಯ ಹುಚ್ಚಾಟ ನಮ್ಮ ಜೀವಕ್ಕೆ ಮಾರಕವಾಗಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದು ಫೇಸ್ ಬುಕ್ ಫೋಸ್ಟ್ ವೊಂದನ್ನು ಹಂಚಿಕೊಂಡಿರುವ ಸ್ನೇಕ್ ಬೈಟ್ ಹೀಲಿಂಗ್ ಮತ್ತು ಎಜ್ಯುಕೇಶನ್ ಸೊಸೈಟೊಯ ಅಧ್ಯಕ್ಷೆ, ಸಂಸ್ಥಾಪಕಕಿ ಪ್ರಿಯಾಂಕಾ ಕದಮ್ ಅವರು ಹಾವು ಕಡಿತದಿಂದ ಗಂಭೀರವಾಗಿ ಗಾಯಗೊಂಡಿರುವ ಸಯೀದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ಮೂಲದ ಉರಗತಜ್ಞ ಅತುಲ್ ಪೈ ಅವರು ಕೂಡ ಇದೇ ರೀತಿಯ ಸಾಹಸ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. “ಕರ್ನಾಟಕದ ಸಿರ್ಸಿಯ ಯುವ ಉತ್ಸಾಹಿ ಮಾಜ್ ಸೈಯದ್ ಅವರು 3 ನಾಗರ ಹಾವುಗಳನ್ನು ಇಟ್ಟುಕೊಂಡು ಅದರೊಂದಿಗೆ ಆಟವಾಡುತ್ತಿದ್ದಾಗ ಕನ್ನಡಕ ಹಾವು ಕಚ್ಚಿದೆ” ಎಂದು ಶ್ರೀ ಪೈ ಫೇಸ್‌ಬುಕ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಪಾಯಕಾರಿ ಹಾವುಗಳೊಂದಿಗೆ ಇಂತಹ ದುಸ್ಸಾಹಸಕ್ಕೆ ಇಳಿಯುವ ಯುವಕರು ಇದರ ದುಷ್ಪರಿಣಾಮದ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version