Home ಟಾಪ್ ಸುದ್ದಿಗಳು ವ್ಯಕ್ತಿಯ ರುಂಡ ಕತ್ತರಿಸಿ ಬೇಲಿಯಲ್ಲಿರಿಸಿದ ದುಷ್ಕರ್ಮಿಗಳು; ಮಣಿಪುರದಲ್ಲಿನ ಮತ್ತೊಂದು ವಿಡಿಯೊ ವೈರಲ್

ವ್ಯಕ್ತಿಯ ರುಂಡ ಕತ್ತರಿಸಿ ಬೇಲಿಯಲ್ಲಿರಿಸಿದ ದುಷ್ಕರ್ಮಿಗಳು; ಮಣಿಪುರದಲ್ಲಿನ ಮತ್ತೊಂದು ವಿಡಿಯೊ ವೈರಲ್

 ಹೊಸದಿಲ್ಲಿ: ಮಣಿಪುರದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣದ ಬೆನ್ನಲ್ಲೇ ಹಿಂಸಾಚಾರ ಪೀಡಿತ ರಾಜ್ಯದಿಂದ ಮತ್ತೊಂದು ಆಘಾತಕಾರಿ ವಿಡಿಯೊ ಹೊರಬಿದ್ದಿದೆ.

ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಈ ವಿಡಿಯೊದಲ್ಲಿ ಕುಕಿ ವ್ಯಕ್ತಿಯ ಕತ್ತರಿಸಿದ ತಲೆಯನ್ನು ಬೇಲಿಯ ಮೇಲೆ ಇರಿಸುವುದು ಕಾಣಿಸುತ್ತದೆ. ಈ ವಿಡಿಯೊದಲ್ಲಿರುವ ಸಂತ್ರಸ್ತನನ್ನು ಮಣಿಪುರದ ಬಿಷ್ಣುಪುರ ಜಿಲ್ಲೆಯ ನಿವಾಸಿ ಡೇವಿಡ್ ಥಿಕ್ ಎಂದು ಗುರುತಿಸಲಾಗಿದೆ.

ಮಣಿಪುರದಲ್ಲಿ ಜುಲೈ 2 ರಂದು ಘರ್ಷಣೆ ನಡೆದಿತ್ತು. ಅಂದು ರಾತ್ರಿ ಸತ್ತ ಮೂವರಲ್ಲಿ ಕುಕಿ ವ್ಯಕ್ತಿಯೂ ಇದ್ದಾನೆ. ಅವನ ತಲೆಯನ್ನು ಕತ್ತರಿಸಿ ಬಿದಿರಿನ ಬೇಲಿಯ ಮೇಲೆ ಮೈತಿ ಉಗ್ರರು ಇರಿಸಿದ್ದಾರೆ ಎಂದು ಹೇಳಲಾಗಿದೆ. ಬಿದಿರಿನ ಬೇಲಿಯಲ್ಲಿರುವ ರಕ್ತದ ಕಲೆಯ ಚಿತ್ರವೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

Join Whatsapp
Exit mobile version