Home ಟಾಪ್ ಸುದ್ದಿಗಳು ವಿನೇಶ್‌ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನ: ಅರ್ಜಿ ವಜಾಗೊಳಿದ ಸಿಎಎಸ್

ವಿನೇಶ್‌ ಫೋಗಟ್ ಬೆಳ್ಳಿ ಪದಕದ ಕನಸು ಭಗ್ನ: ಅರ್ಜಿ ವಜಾಗೊಳಿದ ಸಿಎಎಸ್

ಒಲಿಂಪಿಕ್ಸ್​​ ಫೈನಲ್ಸ್‌ನಿಂದ ಮಹಿಳಾ ಕುಸ್ತಿಪಟು ವಿನೇಶ್​ ಫೋಗಟ್​ ಅನರ್ಹಗೊಂಡಿದ್ದರು. ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ ವಜಾಗೊಳಿಸಿದೆ.

ಅನರ್ಹತೆ ಪ್ರಶ್ನಿಸಿ, ಬೆಳ್ಳಿ ಪದಕಕ್ಕೆ ಪರಿಗಣಿಸುವಂತೆ ಕೋರಿ ಇತ್ತೀಚೆಗೆ ವಿನೇಶ್‌ ಫೋಗಟ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ವಾದ, ಪ್ರತಿವಾದ ಆಲಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದೆ.

ಸೆಮಿಫೈನಲ್​ವರೆಗೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಿ ಗೆದ್ದಿದ್ದ ವಿನೇಶ್, ಫೈನಲ್​ಗೆ ಲಗ್ಗೆ ಇಟ್ಟಿದ್ದರು. ಆದರೆ ಕೇವಲ 100 ಗ್ರಾಂ ತೂಕ ಹೆಚ್ಚಾಗಿರೋದ್ರಿಂದ ಫೈನಲ್​ನಿಂದ ಅನರ್ಹಗೊಳಿಸಲಾಗಿತ್ತು. ಫೈನಲ್​ನಲ್ಲಿ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಕೋರ್ಟ್ ಆಫ್ ಆರ್ಬಿಟ್ರೇಶನ್​ನಲ್ಲಿ ವಿನೇಶ್ ಫೋಗಟ್ ಅರ್ಜಿ ಸಲ್ಲಿಸಿದ್ದರು. ತನಗೆ ಕನಿಷ್ಠ ಬೆಳ್ಳಿ ಪದಕವನ್ನಾದ್ರೂ ನೀಡುವಂತೆ ಒತ್ತಾಯಿಸಿದ್ದರು

Join Whatsapp
Exit mobile version