Home ಟಾಪ್ ಸುದ್ದಿಗಳು ವಿನೇಶ್ ಫೋಗಟ್ ಅನರ್ಹ: ಬ್ರಿಜ್ ಭೂಷಣ್ ಸಿಂಗ್ ಪುತ್ರ ಕರಣ್ ಭೂಷಣ್ ಹೇಳಿದ್ದೇನು?

ವಿನೇಶ್ ಫೋಗಟ್ ಅನರ್ಹ: ಬ್ರಿಜ್ ಭೂಷಣ್ ಸಿಂಗ್ ಪುತ್ರ ಕರಣ್ ಭೂಷಣ್ ಹೇಳಿದ್ದೇನು?

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ 2024ರ ಕುಸ್ತಿ ಪಂದ್ಯದಲ್ಲಿ ಅನರ್ಹವಾಗಿರುವ ವಿನೇಶ್ ಫೋಗಟ್ ಬಗ್ಗೆ ಕೈಸರ್ ಗಂಜ್ ನ ಸಂಸದ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ದೇಶಕ್ಕೆ ದೊಡ್ಡ ನಷ್ಟ ಎಂದು ಹೇಳಿದ್ದಾರೆ.


ಈ ಬಗ್ಗೆ ಫೆಡರೇಶನ್ ಪರಿಗಣನೆಗೆ ತೆಗೆದುಕೊಂಡು ಏನು ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆಸುತ್ತದೆ ಎಂದು ಹೇಳಿದರು.


ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮಹಿಳಾ ಕುಸ್ತಿ ಪಂದ್ಯದ 50 ಕೆಜಿ ವಿಭಾಗದಲ್ಲಿ ಫೈನಲ್ ಗೆ ತಲುಪಿದ್ದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸುವು ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ. ಇದು ಆಘಾತಕಾರಿಯಾಗಿದೆ. ನೀವು ನಮ್ಮ ದೇಶದ ಹೆಮ್ಮೆ ಎಂದು ವಿನೇಶ್ ಫೋಗಟ್ ಪರ ನಿಂತಿದ್ದಾರೆ. ಇನ್ನು ಮೋದಿ ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರ ಜತೆಗೂ ಮಾತನಾಡಿದ್ದಾರೆ. ಪಿಟಿ ಉಷಾ ಕೂಡ ಈ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.


ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿನೇಶ್ ಫೋಗಟ್ ಆರೋಪಿಸಿದ್ದರು. ಈ ಪ್ರಕರಣದಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಭಾರೀ ಮುಜುಗರವನ್ನು ತಂದಿತ್ತು.

Join Whatsapp
Exit mobile version